ಈಗಂತೂ ಪ್ರೇಮಿಗಳು ಎಲ್ಲೆಂದರಲ್ಲಿ ಹುಚ್ಚಾಟ ಮೆರೆಯುವುದು ಕಾಮನ್ ಆಗಿದೆ. ರೈಲ್ವೆ ನಿಲ್ದಾಣ, ಪಾರ್ಕ್, ದೇವಸ್ಥಾನ ಅಂತನೂ ನೋಡಲ್ಲ. ಇಲ್ಲೊಂದು ಜೋಡಿ ಜನ ಸಂದಣಿಯಲ್ಲೇ ರೋಮ್ಯಾನ್ಸ್ ಮಾಡಿ ಸಿಕ್ಕಿ ಬಿದ್ದಿದೆ.
ಇದು ಬೆಂಗಳೂರಿನ ಮೆಜೆಸ್ಟಿಕ್ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ 3 ರಲ್ಲಿ ನಡೆದ ಘಟನೆ ಇದು ಎನ್ನಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ, ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ‘ಕರ್ನಾಟಕ ಪೋರ್ಟ್ಫೋಲಿಯೋ’ ಎಂಬ ಎಕ್ಸ್ ಹ್ಯಾಂಡಲ್ನಲ್ಲಿ, ‘‘ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ?’’ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋ ಎಲ್ಲೆಡೆ ವೈರಲಾಗುತ್ತಿದ್ದು, ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಈ ವಿಡಿಯೋದಲ್ಲಿ ಯುವ ಜೋಡಿಯೊಂದು ಅಕ್ಕಪಕ್ಕ ಮಹಿಳೆಯರು, ಹಿರಿಯರಿದ್ದರೂ ಕೂಡ ಕ್ಯಾರೇ ಎನ್ನದೆ ಅಸಭ್ಯವಾಗಿ ವರ್ತಿಸಿರುವುದನ್ನು ಕಾಣಬಹುದು. ಸುಮಾರು 1 ನಿಮಿಷ 30 ಸೆಕಂಡ್ನ ವಿಡಿಯೋ ಇದಾಗಿದೆ. ವಿಡಿಯೋಗೆ ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.



















