Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಗೆ ಈಗ ಸಜ್ಜಾಗಿ ನಿಂತಿದೆ. ಜುಲೈ 26 ರಿಂದ ಶುರುವಾಗಲಿರುವ ಒಲಿಂಪಿಯಾಡ್ಸ್ ನಲ್ಲಿ ಬಾರಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಹೀಗೆ ಕ್ರೀಡೆಗಾಗಿ ಆಗಮಿಸುವ ಅಥ್ಲೀಟ್ ಗಳಿಗೆ 3 ಲಕ್ಷ ಕಾಂಡೋಮ್ ವಿತರಿಸಲು ನಿರ್ಧರಿಸಲಾಗಿದೆ.
ಒಲಿಂಪಿಕ್ಸ್ ಇದ್ದಲ್ಲಿ ರತಿ ಕ್ರೀಡೆ ಕೂಡ ಅಷ್ಟೇ ಸಾಮಾನ್ಯವಾಗಿರುತ್ತದೆ. ಹಲವು ಕ್ರೀಡಾಪಟುಗಳು ಒತ್ತಡ ನಿವಾರಿಸಿಕೊಳ್ಳಲು ಸೆಕ್ಸ್ ಮೊರೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಲೈಂಗಿಕ ಕಾಯಿಲೆಗಳಿಂದ ತಪ್ಪಿಸುವುದಕ್ಕಾಗಿ ಅಥ್ಲೀಟ್ ಗಳಿಗೆ ಕಾಂಡೋಮ್ ವಿತರಿಸಲಾಗುತ್ತದೆ. ಹೀಗಾಗಿ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ 3 ಲಕ್ಷ ಕಾಂಡೋಮ್ ವಿತರಿಸಲು ಆಯೋಜಕರು ನಿರ್ಧರಿಸಿದ್ದಾರೆ.
2021 ರ ಟೋಕಿಯೋ ಒಲಿಂಪಿಕ್ಸ್ ವೇಳೆ ಕ್ರೀಡಾಪಟುಗಳ ಲೈಂಗಿಕ ಕ್ರಿಯೆಗೆ ನಿರ್ಬಂಧ ವಿಧಿಸಲಾಗಿತ್ತು. ಆ ಸಂದರ್ಭದಲ್ಲಿ ಕೊರೊನಾ ಇದ್ದ ಹಿನ್ನೆಲೆಯಲ್ಲಿ ನಿಷೇಧಿಸಲಾಗಿತ್ತು. ಈ ಬಾರಿಯ ಅಂತಹ ಯಾವುದೇ ಕಟ್ಟುಪಾಡಿಲ್ಲ ಎಂದು ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಹೇಳಿದ್ದಾರೆ.
1988ರಿಂದ ಸಿಯೋಲ್ ನಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಏಡ್ಸ್ ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿತ್ತು. ಹೀಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಒಲಿಂಪಿಕ್ಸ್ ನಲ್ಲಿ ಕಾಂಡೋಮ್ ವಿತರಿಸಲಾಗಿತ್ತು. ಆಗ 8,500 ಕಾಂಡೋಮ್ ಗಳನ್ನು ಸರಬರಾಜು ಮಾಡಲಾಗಿತ್ತು.
2000 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಸುಮಾರು 70 ಸಾವಿರ ಕಾಂಡೋಮ್ ವಿತರಿಸಲಾಗಿತ್ತು. 2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳಿಗೆ 450,000 ಕಾಂಡೋಮ್ ಪೂರೈಸಲಾಗಿತ್ತು. 2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ 150,000 ಕಾಂಡೋಮ್ ವಿತರಿಸಲಾಗಿತ್ತು. ಈಗ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸುಮಾರು 3 ಲಕ್ಷ ಕಾಂಡೋಮ್ ವಿತರಿಸಲು ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದಾರೆ.