ಬೆಂಗಳೂರು: ಇಂದು ಬಿಬಿಎಂಪಿ 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಬ್ರ್ಯಾಂಡ್ ಬೆಂಗಳೂರಿನ ಹೆಸರಿನ ಎರಡನೇ ಬಜೆಟ್ ಮಂಡನೆಯಾಗಲಿದೆ.
ನಗರದ ಟೌನ್ ಹಾಲ್ ನಲ್ಲಿ ಇಂದು ಬೆಳಿಗ್ಗೆ 11ಕ್ಕೆ ಬಜೆಟ್ ಮಂಡನೆಯಾಗಲಿದೆ. ಹಣಕಾಸು ವಿಭಾಗದ ವಿಶೇಷ ಅಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. 5ನೇ ಬಾರಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ, ಅಧಇಕಾರಿಗಳು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಇಂದು ಬೆಳಿಗ್ಗೆ 10.30ಕ್ಕೆ ಆಡಳಿತಾಧಿಕಾರಿಗಳು ಬಜೆಟ್ ಮಂಡಿಸಲಿದ್ದಾರೆ. ಆನಂತರ ಟೌನ್ ಹಾಲ್ ನಲ್ಲಿ 11ಕ್ಕೆ ಬಜೆಟ್ ಮಂಡನೆಯಾಗಲಿದೆ.
ಬಜೆಟ್ ನಿರೀಕ್ಷೆಗಳು..
- ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ..
ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ
ಹೆಚ್ಚುವರಿಯಾಗಿ 52 ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ
ಪ್ರತಿ ವಿಧಾನಸಭ ಕ್ಷೇತ್ರಕ್ಕೆ ಆಂಬ್ಯುಲೆನ್ಸ್
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಡೆಂಟಲ್ ಕ್ಲಿನಿಕ್
ನಮ್ಮ ಕ್ಲಿನಿಕ್ ಅಪ್ ಗ್ರೇಡ್
ಹೆಚ್ಚಿನ ವೈದ್ಯರ ನೇಮಕ ಹಾಗೂ ಕ್ಲಿನಿಕ್ ಗಳಲ್ಲಿ ಔಷಧ ದಾಸ್ತಾನು
ಸೇವ್ ಮಾಮ್ ಹೆಸರಿನಲ್ಲಿ ತಾಯಿ ಹಾಗೂ ಶಿಶುಗಳ ಮರಣ ಪ್ರಮಾಣ ತಗ್ಗಿಸುವುದು
ಪ್ರತಿ ಪ್ರಾಥಮಿಕ ಅರೋಗ್ಯ ಕೇಂದ್ರ ಗಳಿಗೆ ಎಲೆಕ್ಟ್ರಿಕ್ ವಾಹನ ವಿತರಣೆ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಿಜಿಯೋ ಥೆರಪಿ ಕೇಂದ್ರ ಓಪನ್
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೈಗ್ರೇಡ್ ಮಾಡುವುದು
ಕ್ಷೇತ್ರಕ್ಕೆ ಒಂದು 250 ಬೆಡ್ ನ ಆಸ್ಪತ್ರೆ ನಿರ್ಮಾಣ - ಶಿಕ್ಷಣ
ಬಿಬಿಎಂಪಿ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ
ಪ್ರತಿ ಶಾಲೆ, ಕಾಲೇಜುಗಳಿಗೂ ಮೂಲಭೂತ ಸೌಕರ್ಯ ವ್ಯವಸ್ಥೆ
ಪ್ರತಿ ವಿದ್ಯಾರ್ಥಿಗೂ ಪುಸ್ತಕ, ಶೂ, ಸಮವಸ್ತ್ರ ವಿತರಣೆ
ಪ್ರತಿ ಶಾಲಾ, ಕಾಲೇಜು ಕೊಠಡಿಯಲ್ಲಿ ಪಾಠ ಮಾಡೋದಕ್ಕೆ ಸ್ಮಾರ್ಟ್ ಬೋರ್ಡ್
ಉತ್ತಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
ದೃಷ್ಟಿ ದೋಷ ಮಕ್ಕಳಿಗೆ ಉಚಿತ ಕನ್ನಡಕ ವಿತರಣೆ
ಮಧ್ಯಾಹ್ನ ಬಿಸಿ ಊಟದ ಜೊತೆ ಮೊಟ್ಟೆ ವಿತರಣೆ
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು
ಹಳೆಯ ಶಾಲೆ, ಕಾಲೇಜುಗಳ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ - ಕಾಮಗಾರಿಗಳು
ಸರ್ಕಾರದ ಸಹಭಾಗಿತ್ವದಲ್ಲಿ ಬೃಹತ್ ಕಾಮಗಾರಿಗಳ ನಿರ್ಮಾಣಕ್ಕೆ ನಿಗಮ ಸ್ಥಾಪನೆ
ನಗರದ ಟ್ರಾಫಿಕ್ ಕಂಟ್ರೋಲ್
ಪ್ಲೈಓವರ್, ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ
ಮಳೆಗಾಲದಲ್ಲಿ ರಾಜಕಾಲುವೆ ನೀರು ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಾಣ
ಅಡ್ಡ ರಸ್ತೆ ಹಾಗೂ ಮೈನ್ ರಸ್ತೆಗಳಿಗೆ ವೈಟ್ ಟ್ಯಾಪಿಂಗ್
ಹೈಟೆಕ್ ಫುಟ್ ಪಾತ್ ಗಳ ನಿರ್ಮಾಣ
ಅಂಡರ್ ಪಾಸ್, ಸ್ಕೈ ವಾಕ್ ನಿರ್ಮಾಣ
ನಗರದ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಲು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಕೈಡೆಕ್ ನಿರ್ಮಾಣ
ರಸ್ತೆ ಗುಂಡಿಗಳಿಗೆ ಮುಕ್ತಿ ನೀಡುವುದು
ಮೆಟ್ರೋ ನಿಗಮದ ಜೊತೆ ಸೇರಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ
- ಜಾಹೀರಾತು ವಿಭಾಗ
ಕೆಲವು ಪ್ರಮುಖ ಏರಿಗಳಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ
ಸಿಲಿಕಾನ್ ಸಿಟಿಗೆ ಹೊಸ ಜಾಹೀರಾತು ಕಾಯ್ದೆ
ಪಾಲಿಕೆ ಅದಾಯ ಹೆಚ್ಚಸಲು ಜಾಹೀರಾತು ಮೂಲಕ ಅನಧಿಕೃತ ಜಾಹೀರಾತುಗಳಿಗೆ ಬ್ರೇಕ್ - ಕಂದಾಯ ವಿಭಾಗ
ಸಾರ್ವಜನಿಕರಿಗೆ ತೆರಿಗೆ ಕಟ್ಟಲು ದಿನದ 24 ಗಂಟೆ ಆನ್ ಲೈನ್ ವ್ಯವಸ್ಥೆ
ಇ ಖಾತ ನೀಡಲು ನಗರದ ಹಲವು ಕಡೆ ಇ ಖಾತ ವಿತರಣೆ ಕ್ಯಾಂಪ್
ಈ ಬಾರಿ 6 ಸಾವಿರ ಕೋಟಿ ರೂ. ತೆರಿಗೆ ವಸೂಲಿಗೆ ಪ್ರಸ್ತಾವನೆ
ಪಾಲಿಕೆ ವ್ಯಾಪ್ತಿಯ ಎಲ್ಲಾ ನಿವೇಶಗಳಿಗೆ ಇ ಖಾತ ವಿತರಣೆ
ತೆರಿಗೆ ಕಟ್ಟದ ಕಟ್ಟಡಗಳನ್ನು ಹರಾಜು ಮೂಲಕ ತೆರಿಗೆ ವಸೂಲಿ - ಅರಣ್ಯ- ಕೆರೆ ವಿಭಾಗ
ಮಳೆಗಾಲದಲ್ಲಿ ಒಣಗಿದ ಮರ, ಕೊಂಬೆಗಳ ತೆರವಿಗೆ ಹೆಚ್ಚಿನ ಅನುದಾನ
ಮಳೆಗಾಲದಲ್ಲಿ ಒಣಗಿದ ಮರ, ಕೊಂಬೆಗಳ ತೆರವಿಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ
ಸುಮಾರು ಎರಡು ಲಕ್ಷ ಸಸಿಗಳ ನೆಡವುದು
ಕೆರೆ ರಕ್ಷಣೆಗೆ ಕೆರೆ ಸುತ್ತ ತಂತಿ ಬೆಲಿ ನಿರ್ಮಾಣ
ಕೆರೆ ಒತ್ತುವರಿಯನ್ನು ತೆರವು ಮಾಡೋದು
ಕೆರೆಗೆ ಕೊಳಚೆ ನೀರು ಬರದಂತೆ ಗ್ರೇಶ್ ಗೇಟ್ ನಿರ್ಮಾಣ
ಹುಳು ತುಂಬಿದ ಕೆರೆಗಳಲ್ಲಿ ಹುಳು ತೆರವು ಮಾಡಿ ಶುದ್ಧ ನೀರು ಸಂಗ್ರಹ
ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ
ಅಲ್ಲದೇ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ನಿರೀಕ್ಷೆ ಇದೆ. ಕರಗ. ಕೆಂಪೇಗೌಡ ದಿನಾಚರಣೆ, ಅಂಬೇಡ್ಕರ್ ದಿನಾಚರಣೆ ಸೇರಿದಂತೆ ಹಲವು ಸಂಘ- ಸಂಸ್ಥೆಗಳಿಗೆ ಅನುದಾನ ನೀಡಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.