ಬೆಂಗಳೂರು: 2025ನೇ ಸಾಲಿನ ಏರ್ ಶೋಗೆ( Air Show) ಕೌಂಟ್ ಡೌನ್(Countdown) ಶುರುವಾಗಿದೆ. ಏರ್ ಶೋ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್ ಪೋರ್ಟ್ (Kempegowda Airport) ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಫೆ. 10ರಿಂದ 14ರ ವರೆಗೆ ಏರೋ ಇಂಡಿಯಾದ 15ನೇ ಆವೃತ್ತಿಯ ಏರ್ ಶೋ ನಡೆಯಲಿದೆ. ವಿಮಾನ ಹಕ್ಕಿಗಳ ಹಾರಾಟ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ(Yalahanka Air Force Station, Bangalore) ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಫೆ.5ರಿಂದ14ರ ವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯುಯಾನ ಸ್ಥಳಗಿತಗೊಳಿಸಲಾಗಿರುತ್ತದೆ. ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಕೆಂಪೇಗೌಡ ಏರ್ಪೋರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏರ್ ಶೋ ಹಿನ್ನೆಯಲ್ಲಿ 10 ದಿನಗಳ ಅವಧಿಯಲ್ಲಿ ಒಟ್ಟು 47 ಗಂಟೆಗಳ ಕಾಲ ವಿಮಾನಯಾನದಲ್ಲಿ ಅಡಚಣೆ ಉಂಟಾಗಲಿದೆ. ನಿಗದಿತ ಅವಧಿಯಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯು ಪ್ರದೇಶವನ್ನು ಕ್ಲೋಸ್ ಮಾಡಲಾಗುತ್ತದೆ. ಹೀಗಾಗಿ ವಿಮಾನಗಳ ಕಾರ್ಯಾಚರಣೆಗಳು ವ್ಯತ್ಯಯವಾಗಬಹುದು. ಹೀಗಾಗಿ ಪ್ರಯಾಣಿಕರು ತಮ್ಮ ನಿಗದಿತ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ವಿಮಾನ ಹಾರಾಟ ವ್ಯತ್ಯಯದ ಸಮಯ:
ಫೆಬ್ರವರಿ 5 ಮತ್ತು 8
ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.
ಫೆಬ್ರವರಿ 95
ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
ಫೆಬ್ರವರಿ 10
ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ.
ಫೆಬ್ರವರಿ 11 ಮತ್ತು 12
ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ.
ಫೆಬ್ರವರಿ 13 ಮತ್ತು 14
ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರ ವರೆಗೆ ವ್ಯತ್ಯಯ ಉಂಟಾಗಲಿದೆ.