ಬೆಂಗಳೂರು: ರಾಜ್ಯದ ಗುತ್ತಿಗೆ ಕ್ಷೇತ್ರದಲ್ಲಿ ಭಾರೀ ವಿವಾದ ಸೃಷ್ಟಿಸಿದ ಗೋಲ್ಮಾಲ್ ಆಡಿಯೋ ವೈರಲ್ ಆಗಿದ್ದು, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಭ್ರಷ್ಟಾಚಾರದ ಕೇಂದ್ರ ಬಿಂದುವಾಗಿದ್ದಾರೆ ಎಂಬ ಆರೋಪಗಳು ಎದ್ದು ಬಂದಿದೆ.
ಆಡಿಯೋದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಜಿ. ಶಿವಾಜಿ ಹಾಗೂ ನಿರ್ದೇಶಕ ಎಚ್.ಆರ್. ಚಿಂಚಳಿ ತಮ್ಮ ಸಂಗಡಿಗರೊಂದಿಗೆ ಬಡ ಗುತ್ತಿಗೆದಾರರಿಂದ ಕಮಿಷನ್ ವಸೂಲಿಸುವ, ಬಿಡ್ ವಾಪಸ್ ಪಡೆಯಲು ಒತ್ತಡ ಹಾಕುವ ಮಾದರಿಯು ದಾಖಲಾಗಿದೆ.
ವೈರಲ್ ಆಡಿಯೋ ಪ್ರಕಾರ, ಗುತ್ತಿಗೆ ಪಡೆಯಲು ಶೇ. 2.5 ಕಮಿಷನ್ ನೀಡಲು ಒಪ್ಪಿಸಲು ಒತ್ತಡ ನೀಡಲಾಗಿದ್ದು, ಗುತ್ತಿಗೆ ಸಿಕ್ಕ ತಕ್ಷಣ ಡೀಲಿಂಗ್ ಹಣ ನೀಡುವಂತೆ ತಾಕೀತು ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಮತ್ತು ವಿವಿಧ ಇಲಾಖೆಗಳ ಲೋಕೋಪಯೋಗಿ, ಇಂಧನ, ನಗರಾಭಿವೃದ್ಧಿ, ನೀರಾವರಿ ಟೆಂಡರ್‌ಗಳಿಗೂ ಸಂಬಂಧಿಸಿರುವಂತೆ ಆರೋಪಿಸಲಾಗಿದೆ.
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ತಮ್ಮ ಸಂಘದ ನಂಬಿಕೆಗೆ ಮರೆತು, ಬಡ ಗುತ್ತಿಗೆದಾರರ ಮೇಲೆ ಹೊಡೆಯುತ್ತಿರುವುದು ಆಡಿಯೋ ಮೂಲಕ ಸಾಬೀತಾಗಿದೆ. ವಿಷಯದ ಬಗ್ಗೆ ಆಡಳಿತ ಮಂಡಳಿಯ ಮೇಲೂ ಪ್ರಶ್ನೆಗಳು ಎದ್ದು ಬಂದಿದೆ. ಈ ಘಟನೆಯು ಗುತ್ತಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಗಂಭೀರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಸುಮಾರು 25ಕ್ಕಿಂತ ಹೆಚ್ಚು ಲೋಡ್ ಅಡಿಕೆ ಸಿಪ್ಪೆಗೆ ಬೆಂ ಹಚ್ಚಿದ ಕಿಡಿಗೇಡಿಗಳು | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ



















