ಬೆಂಗಳೂರು: ರಾಜ್ಯದ ಗುತ್ತಿಗೆದಾರರ ಸಂಘದ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಕಂಡುಬಂದ ಹಿನ್ನೆಲೆ, ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಜಿ. ಶಿವಾಜಿಯನ್ನು ತಮ್ಮ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ.
ಈಗ ಸಂಘದ ಪದಾಧಿಕಾರಿಗಳ ಸಭೆಯಲ್ಲಿ, ಗೌರವಾಧ್ಯಕ್ಷ ಸ್ಥಾನದಿಂದ ಜಗನ್ನಾಥ್ ಶಿವಾಜಿ ಉಚ್ಚಾಟನೆ ಮಾಡಿದ ಬಗ್ಗೆ ಸಂಘದ ಅಧ್ಯಕ್ಷ ಮಂಜುನಾಥ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ನಿರ್ಧಾರಕ್ಕೆ ಸಂಬಂಧಿಸಿದಂತೆ, ಸಂಘದ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಗುತ್ತಿಗೆದಾರರ ಸಂಘದ ವಿಶ್ವಾಸದ ಮೇಲುಮೈ ಮೇಲೆ ಹೆಚ್ಚಿನ ಚರ್ಚೆಗಳು ನಡೆಯಲಿವೆ.
ಏನಿದು ಘಟನೆ?
ರಾಜ್ಯದ ಗುತ್ತಿಗೆ ಕ್ಷೇತ್ರದಲ್ಲಿ ಭಾರೀ ವಿವಾದ ಸೃಷ್ಟಿಸಿದ ಗೋಲ್ಮಾಲ್ ಆಡಿಯೋ ವೈರಲ್ ಆಗಿದ್ದು, ಆಡಿಯೋದಲ್ಲಿ ಗುತ್ತಿಗೆ ಪಡೆಯಲು ಶೇ. 2.5 ಕಮಿಷನ್ ನೀಡಲು ಒಪ್ಪಿಸಲು ಒತ್ತಡ ನೀಡಲಾಗಿದ್ದು, ಗುತ್ತಿಗೆ ಸಿಕ್ಕ ತಕ್ಷಣ ಡೀಲಿಂಗ್ ಹಣ ನೀಡುವಂತೆ ಹೇಳಲಾಗಿದೆ. ಇದಕ್ಕಾಗಿ ಸರ್ಕಾರ ಮತ್ತು ವಿವಿಧ ಇಲಾಖೆಗಳ ಲೋಕೋಪಯೋಗಿ, ಇಂಧನ, ನಗರಾಭಿವೃದ್ಧಿ, ನೀರಾವರಿ ಟೆಂಡರ್‌ಗಳಿಗೂ ಸಂಬಂಧಿಸಿರುವಂತೆ ಆರೋಪಿಸಲಾಗಿದೆ. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ತಮ್ಮ ಸಂಘದ ನಂಬಿಕೆಗೆ ಮರೆತು, ಬಡ ಗುತ್ತಿಗೆದಾರರ ಮೇಲೆ ಹೊಡೆಯುತ್ತಿರುವುದು ಆಡಿಯೋ ಮೂಲಕ ಸಾಬೀತಾಗಿದೆ. ಇದೀಗ ಸಾಕ್ಷ್ಯಾಧಾರಗಳ ಮೇಲೆ ಜಗನ್ನಾಥ್ ಶಿವಾಜಿಯನ್ನು ಉಚ್ಚಾಟನೆ ಮಾಡಲಾಗಿದೆ.
ಇದನ್ನೂ ಓದಿ : ರಾಜ್ಯ ಗುತ್ತಿಗೆ ಕ್ಷೇತ್ರದಲ್ಲಿ ಭ್ರಷ್ಟಾಚಾರ | ಸಂಘದ ಪದಾಧಿಕಾರಿಗಳ ಗೋಲ್ಮಾಲ್ ಆಡಿಯೋ ವೈರಲ್



















