ಬೆಂಗಳೂರು: ದೇಶಕ್ಕೆ ಮತ್ತೆ ಕೊರೊನಾ ಆತಂಕ ಆವರಿಸಿದ್ದು, ಜನ ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದಾರೆ.
ಕೋವಿಡ್ (Covid) ಹೊಸ ಅಲೆ ಈಗ ದಾಂಗುಡಿ ಇಟ್ಟಿದ್ದು, ಕರ್ನಾಟದಲ್ಲಿ (Karnataka) 8 ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಈ 8 ಪ್ರಕರಣಗಳು ಸೇರಿದಂತೆ ದೇಶಾದ್ಯಂತ 257 ಕೇಸ್ ಪತ್ತೆಯಾಗಿವೆ. ಎಲ್ಎಫ್.7 ಮತ್ತು ಎನ್ಬಿ.1.8 ತಳಿಗಳು ಪತ್ತೆಯಾಗಿದ್ದು, ಕೊರೊನಾದ ಜೆಎನ್.1 ಗೆ ಸೇರಿದೆ.
ಭಾರತದಲ್ಲಿ 257 ಪ್ರಕರಣಗಳು ಹಾಗೂ ಕರ್ನಾಟಕದಲ್ಲಿ 8 ಕೇಸ್ ಪತ್ತೆಯಾಗಿದ್ದು, ಕೇರಳದಲ್ಲಿ 69, ಮಹಾರಾಷ್ಟ್ರ 44, ತಮಿಳುನಾಡು 34, ಗುಜರಾತ್, ದೆಹಲಿ, ಹರಿಯಾಣ, ರಾಜಸ್ಥಾನ, ಸಿಕ್ಕಿಂನಲ್ಲೂ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಆದರೆ, ಅದೃಷ್ಟವಶಾತ್ ಯಾವುದೇ ರೀತಿಯ ಗಂಭೀರ ಗುಣಲಕ್ಷಣಗಳು ಕಂಡು ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಆದರೂ ನಿರ್ಲಕ್ಷ್ಯ ಬೇಡ ಎಂದು ಸೂಚಿಸಿದ್ದಾರೆ. ಈಗಾಗಲೇ ಸಿಂಗಾಪುರ ಮತ್ತು ಹಾಂಗ್ಕಾಂಗ್ನಲ್ಲಿ ಅಲರ್ಟ್ ಘೋಷಿಸಲಾಗಿದೆ.