ಬಿಬಿಎಂಪಿ ಕೇಂದ್ರ ಕಚೇರಿಗೆ ಇಡಿ ಅಧಿಕಾರಿಗಳು ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಡಿ ಅಧಿಕಾರಿಗಳು ಸರ್ಚ್ ವಾರೆಂಟ್ ಮೇಲೆ ಬಂದು ದಾಖಲೆ ಪರಿಶೀಲನೆಗೆ ಮುಂದಾಗಿದ್ದಾರೆ. ಮಂಗಳವಾರ ಪ್ರಹ್ಲಾದ್ ಮೂಲಕ ಕರೆ ಮಾಡಿ ದಾಖಲೆಗಳಿಗೆ ಸಹಕರಿಸುವಂತೆ ಕೇಳಿದ್ದಾರೆ. ಅದಕ್ಕೆ ನಾನು ಕೂಡ ಪ್ರತಿಕ್ರಿಯೆ ನೀಡಿದ್ದೇನೆ. ನಿಮಗೆ ಪವರ್ ಇದೆ. ನಿಮಗೆ ಯಾವ ದಾಖಲೆ ಬೇಕು ತಗೋಳಿ ಅಂತಾ ಹೇಳಿದ್ದೇನೆ. 2016ರಿಂದ 2019ರ ವರೆಗೆ ನಡೆದಿದ್ದ ಬೊರ್ ವೆಲ್ ಕಾಮಗಾರಿ ಕುರಿತು ದಾಖಲೆ ಕೇಳಿದ್ದಾರೆ. ಅದಕ್ಕೆ ನಾವು ಸಹಕರಿಸುತ್ತಿದ್ದೇವೆ.
ಇಂದು ಕೂಡ ಪಾಲಿಕೆ ಕೇಂದ್ರ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮುಂದುವರಿದೆ. 2014ರಿಂದ 2024ರ ವರೆಗೆ ಯೋಜನೆಗಳ ದಾಖಲೆ ಕೇಳುತ್ತಿದ್ದಾರೆ. ಅದಕ್ಕೂ ನಾವು ಸಹಕರಿಸುತ್ತೇವೆ ಎಂದಿದ್ದಾರೆ.