ನಾಳೆ ವಿಶ್ವದಾದ್ಯಂತ 4000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 171ನೇ ಸಿನಿಮಾ ಕೂಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗು ಮುಂಚೆಯೇ ಹೈಪ್ ಗಿಟ್ಟಿಸಿಕೊಂಡಿರುವ ಕೂಲಿ, ಈಗಾಗಲೇ ಪ್ರಿರಿಲೀಸ್ ವ್ಯವಹಾರಗಳಲ್ಲಿ ಹೊಸ ರೆಕಾರ್ಡ್ ಮುರಿದಿದೆ. ರಜನಿಕಾಂತ್ ಅಪ್ಪಟ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಕೂಲಿಗೆ ಮೊದಲ ದಿನವೇ ಅದ್ದೂರಿ ವೆಲ್ಕಂ ಸಿಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ರಜನಿ ಸಿನಿಮಾದ ತಾಕತ್ತು ಕನ್ನಡಿಗರಿಗೂ ಬಿಸಿ ಮುಟ್ಟಿಸುತ್ತಿದೆ.

ಬೆಂಗಳೂರಿನಲ್ಲಿ ಮೊದಲ ಶೋಗಳ ಟಿಕೇಟುಗಳು ಸೋಲ್ಡ್ ಔಟ್ ಆಗಿವೆ. ಕೂಲಿಯನ್ನು ಫಟ್ ಡೇ ಫಸ್ಟ್ ಶೋ ನೋಡಲೇಬೇಕು ಅಂತ ತುದಿಗಾಲಲ್ಲಿ ನಿಂತಿರುವ ರಜನಿ ಬಳಗ, ಬೆಳಗ್ಗೆಯಿಂದಲೇ ಹಬ್ಬಕ್ಕೆ ರೆಡಿಯಾಗಿದ್ದಾರೆ. ಮಲ್ಟಿಪ್ಲೆಕ್ಸ್ ಗಳಲ್ಲಂತೂ ದಿನಕ್ಕೆ 30ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳುತ್ತವೆ. ಮಾಮೂಲಿಯಂತೆ ಟಿಕೆಟಿಗಾಗಿ ಜಗಳ ಗಲಾಟೆಗಳು ನಡೆಯಲ್ಲ. ಯಾಕಂದ್ರೆ ರಜನಿಕಾಂತ್ ಹವಾ ಬಿಡುಗಡೆಗೂ ಮುಂಚೆಯೇ ಪ್ರೂವ್ ಆಗಿಹೋಗಿದೆ. ತಮಿಳುನಾಡಿನ ಕೆಲವು ಥಿಯೇಟರ್ ಗಳಲ್ಲಿ 5000ಕ್ಕೆ ಟಿಕೆಟ್ ಬ್ಲಾಕ್ ಮಾರಾಟವಾಗಿರೋದೇ ಇದಕ್ಕೆ ಸಾಕ್ಷಿ..!
ಬೆಂಗಳೂರಿನಲ್ಲಿ ಸದ್ಯಕ್ಕೆ ಕೂಲಿ ಕನ್ನಡದಲ್ಲಿ ರಿಲೀಸ್ ಆಗ್ತಿದ್ದರೂ ಕೂಡ ಯಾವುದೇ ಬೇಡಿಕೆ ಇಲ್ಲ. ರಜನಿ ಆಕ್ಟಿಂಗ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಗತ್ತು ಹೇಗಿರುತ್ತೆ ಎನ್ನುವುದೇ ಕನ್ನಡಿಗರ ಸಮಾಧಾನದ ಕುತೂಹಲ. ಜೊತೆಗೆ ಅಮೀರ್ ಖಾನ್ ಹಾಗೂ ನಾಗಾರ್ಜುನ ಕೂಡ ಪ್ರೇಕ್ಷಕರನ್ನ ಸೆಳಿತಿದ್ದಾರೆ. ಮೂಲಭಾಷೆ ತಮಿಳಿನಲ್ಲೇ ಕೂಲಿ ಸಿನಿಮಾವನ್ನು ಕಂಡು ಕಣ್ಣು ತುಂಬಿಕೊಳ್ಳುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಮಧ್ಯೆಯೇ ಯಶಸ್ವಿಯಾಗಿ ಓಡುತ್ತಿರುವ ಕನ್ಡಡದ ಸು from ಸೋಗೂ ರಜನಿ ಗುನ್ನ ಬಿದ್ದಿದೆ. ಹೊಸ ನೀರು ಬಂದರೆ ಹಳೆ ನೀರು ಕೊಚ್ಚಿಕೊಂಡು ಹೋಗುತ್ತೆ ಎನ್ನುವುದು ಇಲ್ಲಿ ಸತ್ಯವಾಗಿದೆ. ಮೂರು ದಿನ ರಜಾ ಇರುವುದು ಕೂಡ ಕೂಲಿ ಪಾಲಿಗೆ ಅಕ್ಷಯ ಪಾತ್ರೆನೇ..! ಜೈ ಜೈ ತಲೈವ ಎಂಬುದೇ ನಮಗಿರುವ ಲಾಸ್ಟ್ ಅಪ್ಷನ್..!



-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಕರ್ನಾಟಕ ನ್ಯೂಸ್ ಬೀಟ್.



















