ಚಿಕ್ಕಮಗಳೂರು: ಮಲೆನಾಡಿನಲ್ಲಿ ಬಿರುಗಾಳಿ ಮಳೆ ಮುಂದುವರೆದಿದ್ದು, ಹಲವೆಡೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಬಿರುಗಾಳಿ ಮಳೆಗೆ ಮನೆಯ ಮೇಲೆ ಅಕೇಶಿಯ ಮರ ಮುರಿದು ಬಿದ್ದಿದ್ದು, ಎರಡು ಮನೆಗಳ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದೆ. ಈ ಘಟನೆ ಕೊಪ್ಪ ತಾಲೂಕಿನ ಯಡದಂಟೆ ಗ್ರಾಮದಲ್ಲಿ ನಡೆದಿದೆ.
ಯಡದಂಟೆಯ ಮನ್ವಿತಾ ಅಫ್ರಿದ್ ಮತ್ತು ರಫೀಕ್ ಎಂಬುವವರ ಮನೆಗಳು ಹಾನಿಗೊಳಗಾಗಿವೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ಮಲೆನಾಡಿನಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಸುತ್ತಿರುವ ಬಿರುಗಾಳಿ ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ.