ಬೆಂಗಳೂರು: ಟನಲ್ ರಸ್ತೆ ನಿರ್ಮಾಣದಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುವ ಮುನ್ಸೂಚನೆ ಇದ್ದು, ಜನರು ಬೆಚ್ಚಿ ಬೀಳುತ್ತಿದ್ದಾರೆ. ಈ ರಸ್ತೆ ನಿರ್ಮಾಣದಿಂದ ಸುಮಾರು 20 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ತೊಂದರೆಯಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಈ ರಸ್ತೆ ನಿರ್ಮಾಣ ಮಾಡುವುದರಿಂದಾಗಿ ತಾಂತ್ರಿಕವಾಗಿ ಸುಮಾರು 20 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ತೊಂದರೆಯಾಗಬಹುದು. ಸುಮಾರು 10 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರಿನ ಅಭಾವ ಉಂಟಾಗಬಹುದು. ಬೃಹತ್ ಕಟ್ಟಡಗಳ ಅಡಿಪಾಯಕ್ಕೆ ಅಪಾಯ ಎದುರುಗಾಬಹುದು ಎನ್ನಲಾಗುತ್ತಿದೆ.
ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸರ್ಕಾರ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಹೆಬ್ಬಾಳವರೆಗೆ ಸುಮಾರು 17 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಟನಲ್ ರಸ್ತೆ ನಿರ್ಮಾಣಕ್ಕೆ ಡಿಪಿಅರ್ ಸಿದ್ದತೆ ಮಾಡಿ. ಟೆಂಡರ್ ಕರೆಯಲು ಬಿಬಿಎಂಪಿ ಮುಂದಾಗಿದೆ.
ಆದರೆ, ಟನಲ್ ರಸ್ತೆ ನಿರ್ಮಾಣದಿಂದ ಮನೆಗಳ ಬೋರ್ ವೆಲ್ ಗೆ ಭಾರೀ ಹೊಡೆತ ಬೀಳಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಸುರಂಗ ಮಾರ್ಗದಲ್ಲಿ ರಸ್ತೆ ಬರುವ ಹಿನ್ನೆಲೆಯಲ್ಲಿ ಮನೆಗಳ ಬೋರ್ ವೆಲ್ ಗೆ ಸಂಕಷ್ಟವಾಗಬಹುದು. ಟನಲ್ ರಸ್ತೆ ನಿರ್ಮಾಣಕ್ಕೆ ಅಂತ ಸುಮಾರು 300 ರಿಂದ 500 ಅಡಿ ಆಳಕ್ಕೆ ರಸ್ತೆ ಅಗೆಯಲಾಗುತ್ತದೆ. ಹೀಗಾಗಿ ಬೋರ್ ವೆಲ್ ಗೆ ಸಂಚಕಾರ ಬರಲಿದೆ ಎನ್ನಲಾಗುತ್ತಿದೆ.
ಸುಮಾರು ಸಾವಿರಕ್ಕೂ ಅಧಿಕ ಮನೆಗಳು ಬೋರ್ ವೆಲ್ ನೀರನ್ನೇ ಅವಲಂಬಿಸಿವೆ. ಬೋರ್ ವೆಲ್ ನೀರಿಗಾಗಿ ಸುಮಾರು 800 ರಿಂದ 1100 ಅಡಿಗಳಷ್ಟು ಭೂಮಿ ಕೊರೆಯಲಾಗಿದೆ. ಒಂದು ವೇಳೆ ಈ ಕಾಮಗಾರಿ ಆರಂಭವಾದರೆ ಮನೆಗಳಿಗೆ ಹಾಕಿಸಿರುವ ಬೋರ್ ವೆಲ್ ಗಳನ್ನು ತೆಗೆಯಬೇಕು. ಬೋರ್ ವೆಲ್ ತೆಗೆದರೆ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಇನ್ನೊಂದೆಡೆ 300 ರಿಂದ 400 ಅಡಿಗಳಷ್ಟು ಆಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುತ್ತಾರೆ. ಈ ಟನಲ್ ರಸ್ತೆ ಇಂತಹ ಕಟ್ಟಡಗಳ ಕೆಳಗೆ ಹಾದು ಹೋದರೆ ಕಟ್ಟಡಗಳಿಗೆ ಅಪಾಯ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.