ಹಾವೇರಿ: ಪುನೀತ್ ನಮ್ಮನ್ನು ಅಗಲಿ ಹಲವು ದಿನಗಳು ಕಳೆದರೂ ಅವರು ಮಾತ್ರ ಇನ್ನು ಜನ ಮಾನಸದಲ್ಲಿ ಉಳಿದಿದ್ದಾರೆ. ಈಗಾಗಲೇ ಹಲವೆಡೆ ಅವರ ಪುತ್ಥಳಿ ನಿರ್ಮಾಣ, ವೃತ್ತ ನಿರ್ಮಾಣ ಮಾಡಲಾಗಿದೆ. ಆದರೆ, ಈಗ ದೇವಸ್ಥಾನವನ್ನೇ ನಿರ್ಮಿಸಲಾಗಿದೆ. ಗುರುವಾರ ಈ ದೇವಸ್ಥಾನದ ಉದ್ಘಾಟನಾ ಕಾರ್ಯ ಕೂಡ ನಡೆಯುತ್ತಿದೆ.
ಜಿಲ್ಲೆಯ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಪುನೀತ್ ಅವರ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನವನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಮತ್ತು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜಕುಮಾರ್ ಉದ್ಘಾಟಿಸಲಿದ್ದಾರೆ.
ಯಲಗಚ್ಚ ಗ್ರಾಮದ ಡ್ಯಾನ್ಸ್ ಮಾಸ್ಟರ್ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ದಿ.ಪುನೀತ್ ರಾಜಕುಮಾರ ದೇವಸ್ಥಾನ ನಿರ್ಮಿಸಿದ್ದಾರೆ. ಅಶ್ವಿನಿ ಅವರು ಅಪ್ಪು ಅಭಿಮಾನಿ ಪ್ರಕಾಶ್ ಅವರ ಮಗಳಿಗೆ ನಾಮಕರಣ ಮಾಡಲಿದ್ದಾರೆ. ನಂತರ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ನಟ, ಸಹನಟರು ಹಾಗೂ ರಾಜಕಾರಣಿಗಳು ಮತ್ತು ಹಲವು ಮಠಾಧೀಶರು ಆಗಮಿಸಲಿದ್ದಾರೆ.