ದೇವನಹಳ್ಳಿ : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ವಿಮಾನ ನಿಲ್ದಾಣದ ಆಲ್ಫಾ ಹೋಟೆಲ್ನಲ್ಲಿ ರಾತ್ರಿ ಬೀಟ್ ಡ್ಯೂಟಿಯಲ್ಲಿದ್ದ ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎಂಬ ಮೂವರು ಪೊಲೀಸರು ಕಾಫಿ ಕುಡಿದ ನಂತರ ಹೋಟೆಲ್ ಸಿಬ್ಬಂದಿ ಬಿಲ್ ಕೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಪೊಲೀಸರು, ನಾವು ಪೊಲೀಸರು, ನಮಗೆ ಬಿಲ್ ಏಕೆ ಎಂದು ದರ್ಪದಿಂದ ವರ್ತಿಸಿದ್ದಾರೆ. ಪೊಲೀಸರು ಹೋಟೆಲ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಮೂವರು ಕಾನ್ಸ್ಟೆಬಲ್ಗಳ ವಿರುದ್ದ ಕೆಂಪೇಗೌಡ ಪೊಲೀಸ್ ಠಾಣೆಯಲ್ಲೇ FIR ದಾಖಲಾಗಿದೆ. ಇನ್ನು ಪೊಲೀಸರು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಭಾರತ-ಪಾಕ್ ಟಿ20 ಕದನಕ್ಕೂ ಮುನ್ನ ಗಂಭೀರ ಆರೋಪ | ‘ಜೈ ಶಾ ಪ್ರಭಾವದಿಂದ ಪಿಚ್ ತಿರುಚುವ ಸಾಧ್ಯತೆ ಇದೆ’ ಎಂದ ಪಾಕ್ ದಿಗ್ಗಜ!



















