ನವದೆಹಲಿ: ದೇಣಿಗೆ ನೀಡಿದ್ದ 199 ಕೋಟಿ ರೂ. ಆದಾಯ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ (Congress Party) ಮುಜುಗುರವಾಗಿದೆ.
2018-19ರಲ್ಲಿ 199.15 ಕೋಟಿ ರೂ. ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಐಟಿ ರಿಟರ್ನ್ಸ್ ನ್ನು ತಡವಾಗಿ ಸಲ್ಲಿಸಿದ್ದಕ್ಕ ವಿನಾಯಿತಿಗಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಜಾಗೊಳಿಸಿದೆ.
2018-19ರಿಂದ ಬಾಕಿ ಇರುವ ಕಾಂಗ್ರೆಸ್ ಪಕ್ಷದ ನಿಧಿಯ 199 ಕೋಟಿ ರೂ.ಗಳವರೆಗಿನ ಆದಾಯ ತೆರಿಗೆಗೆ ಕಾಂಗ್ರೆಸ್‌ಗೆ ಯಾವುದೇ ಪರಿಹಾರ ಸಿಗುವುದಿಲ್ಲ. ದೇಣಿಗೆ ಪಡೆದ ಹಣಕ್ಕೆ ರಾಜಕೀಯ ಪಕ್ಷ ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಆದರೆ, ಕಾಂಗ್ರೆಸ್ ತಡವಾಗಿ ಐಟಿ ರಿಟರ್ನ್ ಸಲ್ಲಿಸಿರುವುದರಿಂದ ಹಾಗೂ ನಗದು ರೂಪದಲ್ಲಿ ದೇಣಿಗೆ ಪಡೆಯುವ ಮಿತಿಯನ್ನು ಉಲ್ಲಂಘಿಸಿರುವುದರಿಂದ ವಿನಾಯತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.



















