ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕೆಲವು ದಿನಗಳಿಂದಲೂ ಕೆಪಿಸಿಸಿ ಅಧ್ಯಕ್ಷರ (KPCC) ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿತ್ತು. ಈ ವಿಷಯವಾಗಿಯೇ ಬಣಗಳ ಮಧ್ಯೆ ಗಲಾಟೆ ಕೂಡ ನಡೆದಿತ್ತು.
ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಸುಳಿವು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆಯ ಕಾರ್ಯ ನಡೆಯುತ್ತಿದೆ.
ಓಡಿಶಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದಿನಿ. ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗಲಿವೆ. ಈ ಬಗ್ಗೆ ನಿರ್ಧಿಷ್ಟವಾಗಿ ನಾನು ಹೇಳುವುದಕ್ಕೆ ಆಗುವುದಿಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಎಂಟು ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಭೇಟಿ ದೊಡ್ಡ ಮಾತಾ? ಎಂದು ಪ್ರಶ್ನೆ ಮಾಡಿದ ಅವರು, ನಾನು ಎಐಸಿಸಿ ಅಧ್ಯಕ್ಷ, ಎಲ್ಲರೂ ಬಂದು ಭೇಟಿ ಮಾಡುತ್ತಾರೆ ಇದು ದೊಡ್ಡ ಮಾತಾ? ನಮ್ಮ ರಾಜ್ಯದವರಿಗೆ ಬೇಗ ಅಪಾಯಿಂಟಮೆಂಟ್ ಸಿಗುತ್ತೆ, ಬಂದವರಿಗೆ ಬೇಡ ಅನ್ನಲು ಆಗುತ್ತಾ? ಪರಮೇಶ್ವರ್ ಬರುತ್ತಾರೆ. ಡಿಕೆ ಶಿವಕುಮಾರ ಬರುತ್ತಾರೆ. ಸತೀಶ್ ಜಾರಕಿಹೊಳಿ ಕೂಡ ಬರುತ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ ಎಂದು ಹೇಳಿದ್ದಾರೆ.
ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ ಫೋನ್ ನಲ್ಲೇ ಮಾತನಾಡಬೇಕಿತ್ತು. ನಮ್ಮ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್ ಫ್ಲೈಟ್ ನಲ್ಲಿ ಕಳುಹಿಸಬೇಡಿ. ನಿಮ್ಮ ಸ್ವಂತ ಪ್ಯಾಸೆಂಜರ್ ಫ್ಲೈಟನಲ್ಲಿ ಕಳಿಸಿ ಎಂದು. ಟ್ರಂಪ್ ಕ್ಲೋಸ್ ಇದ್ದಾರೆ, ಫ್ರೆಂಡ್ ಇದ್ದಾರೆ ಅಂತೆಲ್ಲಾ ಹೇಳಿಕೊಳ್ತಿರಿ. ಅವರು ನಿಮ್ಮ ಫ್ರೆಂಡ್ ಇರಬಹುದು, ನಮ್ಮ ದೇಶದ ಫ್ರೆಂಡ್ ಇರಬೇಕಲ್ವಾ? ನಿಮ್ಮ ಫ್ರೆಂಡ್ ಇದ್ದವರು ಅದೇ ಕಾಳಜಿ ದೇಶದ ಬಗ್ಗೆ ವಹಿಸೇಕು ಅಲ್ವಾ ಎಂದು ಆರೋಪಿಸಿದ್ದಾರೆ.