
ಕೆಪಿಸಿಸಿ OBC ವಿಭಾಗಕ್ಕೆ ಬೆಂಬಲಿಗರ ನೇಮಕ!!
ಡನ್ನರ್ ಪಾಲಿಟಿಕ್ಸ್ ಮೂಲಕ ತಮ್ಮ ಬುಡಕ್ಕೆ ಬೀಳುತ್ತಿದ್ದ ಬಿಸಿಯ ಕಾವಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಮಂತ್ರ ಶುರುವಿಟ್ಟಂತಿದೆ. ತನ್ನ ಶಕ್ತಿ ಪ್ರದರ್ಶನವಾಗದ ಹೊರತು ಎದುರಾಳಿಗಳ ಆಟ ನಿಲ್ಲದು ಎಂಬುದನ್ನು ಅರಿತಿರುವ ಡಿಕೆಶಿ, ಸದ್ಯ ಓಬಿಸಿ ಘಟಕಕ್ಕೆ ತಮ್ಮವರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿಕೊಳ್ಳುವ ಮೂಲಕ ಅಕ್ಕ-ಪಕ್ಕಕ್ಕೆ ಸಣ್ಣದೊಂದು ಸಂದೇಶ ರವಾನಿಸಿದ್ದಾರೆ. ಅದರಂತೆ ವಿಧಾನಪರಿಷತ್ ಸದಸ್ಯ ಟಿಡಿ ಶ್ರೀನಿವಾಸ್ ಈಗ OBC ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಮಹತ್ತರ ಬೆಳವಣಿಗೆಯ ಮೂಲಕ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನ ಪಕ್ಷಕ್ಕೆ ಕರೆತಂದಿದ್ದ ಡಿಕೆ ಶಿವಕುಮಾರ್, ಇದೀಗ ಆಕೆಯ ಪತಿ ಶ್ರೀನಿವಾಸ್ ಗೆ OBC ರಾಜ್ಯಾಧ್ಯಕ್ಷ ಸ್ಥಾನ ನೀಡಿ ಕೊಟ್ಟ ಭರವಸೆ ನೆರವೇರಿಸಿದ್ದಾರೆ. ಸದ್ಯ ಈ ಬೆಳವಣಿಗೆಯು ಎದುರಾಳಿ ಪಾಳಯಕ್ಕೆ ಶಕ್ತಿ ಪ್ರದರ್ಶನದ ಟ್ರೈಲರ್ ಬಿಟ್ಟಂತಾಗಿದೆ ಎನ್ನಲಾಗುತ್ತಿದೆ.