ಉಡುಪಿ : ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಆರಂಭ ಮಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪೇಜಾವರ ವಿಶ್ವಪ್ರಸನ್ನರ ಮಾರ್ಗದರ್ಶನದಲ್ಲಿ ಗೋವಿಗಾಗಿ ಮೇವು ಸಂಘಟನೆಯ ಮೂಲಕ ರಾಜ್ಯದ ಮನೆಮಾತಾದವರು.
ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಪಾದರಸದಂತೆ ಸದಾ ಕಾಂಗ್ರೆಸ್ ಪಕ್ಷದ ವಿರುದ್ದ ಗುಡುಗುವ ಇವರನ್ನು ಹತ್ತಿಕ್ಕಲು, ಅಪಪ್ರಚಾರಕ್ಕೆ ಮುಂದಾಗಿರುವ ಕಾಂಗ್ರೆಸ್ ಬಾರ್ಕೂರಿನಲ್ಲಿ ಇವರ ಮಾಲೀಕತ್ವದ ಸಂಕಮ್ಮ ತಾಯಿ ರೆಸಾರ್ಟ್‌ನಲ್ಲಿ ನೇಪಾಳ ಮೂಲದ ಪ್ರಜೆಗಳು ಕೆಲಸದಲ್ಲಿರುವುದನ್ನೇ ದೊಡ್ಡ ದೇಶದ್ರೋಹ ಎನ್ನುವ ರೀತಿ ಬಿಂಬಿಸಿ ಅವರ ತೇಜೋವಧೆ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ಥಾನಕ್ಕೆ ಜೈಕಾರ ಹಾಕುವವರನ್ನು ಬೆಂಬಲಿಸುವ ಕಾಂಗ್ರೆಸ್ ಪುಡಾರಿಗಳಿಂದ ದಿನನಿತ್ಯ ಯುವಮೋರ್ಚಾ ಜಿಲ್ಲಾದ್ಯಕ್ಷರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದು ಕಂಡುಬಂದಿದ್ದು ಇವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಕ್ಲು ಶಿವ ಕೊಲೆ ಕೇಸ್ | ಬೈರತಿ ಬಸವರಾಜುಗೆ ಲುಕ್‌ಔಟ್ ನೋಟಿಸ್ ; ಬಂಧನದ ಭೀತಿಯಲ್ಲಿ ಶಾಸಕ



















