ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರದಿಂದ ಆರಂಭವಾಗಿರುವ ವಿಧಾನಮಂಡಲದ ಜಂಟಿ ಬಜೆಟ್ ಅಧಿವೇಶನದ ಮಧ್ಯೆ ನಡೆಯುವ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದೆ. ಈಗಾಗಲೇ ಬಿಜೆಪಿ ತನ್ನ ಪಕ್ಷದ ಶಾಸಕರುಗಳು, ವಿಧಾನಪರಿಷತ್‌ನ ಸದಸ್ಯಗಳನ್ನು ಒಗ್ಗೂಡಿಸಿ, ಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷೆ ಮಾಡಿಕೊಂಡಿದೆ. ಆದ್ರೆ ಕಾಂಗ್ರೆಸ್ ಇಂದು ತನ್ನ ಪಕ್ಚದ ಶಾಸಕಾಂಗ ಸಭೆಯನ್ನು ಇಂದು ನಡೆಸಲು ಮುಂದಾಗಿದೆ.
ಸಿದ್ಧರಾಮಯ್ಯರ ನೇತೃತ್ವದಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಬಜೆಟ್ ಮಂಡನೆಯಾಗಿದೆ. ಈಗ ವಿಪಕ್ಷಗಳ ಬಾಯಿಯನ್ನು ಮುಚ್ಚಿಸುವುದು ಹೇಗೆ? ಅವರ ಪ್ರಶ್ನೆಗಳಿಗೆ ಉತ್ತರ ಹೇಗಿರಬೇಕು? ಪ್ರತಿಭಟನೆಗೆ ತಿರುಗೇಟು ಹೇಗಿರಬೇಕು? ಎಂಬುದರ ರೂಪುರೇಷೆ ಇಂದು ಕಾಂಗ್ರೆಸ್ ನಾಯಕರು ಸಿದ್ಧಪಡಿಸಲಿದ್ದಾರೆ.