ಬೆಂಗಳೂರು : ಸಿಎಂ ಹಾಗೂ ಮಹದೇವಪ್ಪ ಅವರಿಗೆಲ್ಲಾ ಮೈಸೂರಿನ ಮಹಾರಾಜರಿಗೆ ಅಪಮಾನ ಮಾಡುವುದರಲ್ಲಿ ಸಂತೋಷವಿದೆಯೇನೋ ಎಂದು “ಕೆ.ಆರ್.ಎಸ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್” ಎಂಬ ಹೆಚ್ .ಸಿ ಮಹಾದೇವಪ್ಪ ಅವರ ಹೇಳಿಕೆಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
1799 ರಲ್ಲೇ ಟಿಪ್ಪು ಮೃತಪಟ್ಟಿದ್ದಾರೆ, 1902 ರ ನಂತರ ಕೆಆರ್ ಎಸ್ ಕಟ್ಟುವ ಚಿಂತನೆ ಆರಂಭ ಆಗಿದ್ದು, ನಂತರ 19011-12 ರಲ್ಲಿ ಅನುಮತಿ ಸಿಕ್ಕಿದ ಬಳಿಕ 1933 ರಲ್ಲಿ ಡ್ಯಾಂ ನಿರ್ಮಾಣ ಪೂರ್ಣವಾಗಿದೆ. ಮಹದೇವಪ್ಪ ಇತಿಹಾಸ ತಿರುಚುವ ಮೂಲಕ ಮಹಾರಾಜರ ಮನೆತನಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಇದೇ ರೀತಿ ಕೆ.ಆರ್.ಎಸ್ ನಿರ್ಮಾಣಕ್ಕೆ ಮಹಾರಾಜರ ತಾಯಿ ಬಂಗಾರ ಮಾರಿದ್ದರು ಎಂದು ಯತೀಂದ್ರ ಸಹ ಮಾತನಾಡಿದ್ದರು. ಮಹಾದೇವಪ್ಪ ಮಾತಾಡಿದ್ದು ಅಕ್ಷ್ಮಮ್ಯ ಅಪರಾಧ. ಕಾಂಗ್ರೆಸ್ ನಾಯಕರು ಎಲ್ಲದರಲ್ಲೂ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು, ಯಾದವಾಡದಲ್ಲಿ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ್ದರು, ಮುಸ್ಲಿಂ ಹೆಡ್ ಮಾಸ್ತರನ್ನ ಓಡಿಸಲು ಈ ಕೃತ್ಯ ಮಾಡಲಾಗಿದೆ ಎಂದು ತನಿಖೆಗೆ ಮುಂಚೆಯೆ ಸಿಎಂ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಓಲೈಕೆಯ ಬಗ್ಗೆ ವಿಜಯೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.



















