ಕೋಲಾರ : ವಾಜಪೇಯಿ ಸರ್ಕಾರ ಮಾಡಿದ ಸ್ಕೀಮ್‌ಗಳಿಗೆ ಕಾಂಗ್ರೆಸ್ ಹೆಸರು ಬದಲಿಸಿದೆ. ಕಾಂಗ್ರೆಸ್ ಬಿಜೆಪಿ ಸರ್ಕಾರದ ಬಹಳಷ್ಟು ಯೋಜನೆಗಳನ್ನು ತಮ್ಮದು ಅಂತ ಬಿಂಬಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಹೊಸ VBGRAM ಯೋಜನೆಯಿಂದ ಜನರಿಗೆ ಸಮಸ್ಯೆಯಿಲ್ಲ, ಕಾಂಗ್ರೆಸ್ ನವರಿಗೆ ಸಮಸ್ಯೆಯಾಗಿರುವುದು. ಯಾವ ಕೆಲಸ ಮಾಡಬೇಕು ಅಂತ ಗ್ರಾಮ ಸಭೆಯಲ್ಲಿಯೇ ತೀರ್ಮಾನ ಆಗುತ್ತೆ. ಒಂದು ವಾರದೊಳಗೆ ಆ ಹಣ ಅವರ ಖಾತೆಗಳಿಗೆ ಬರುತ್ತೆ. ಎಲ್ಲಾ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲೇ ಬರುತ್ತೆ. ಈ ಯೋಜನೆ ಇಡೀ ದೇಶದಲ್ಲಿಯೇ ಇದೆ, ಇದನ್ನು ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದೆ. ಒಳಿತು ಮಾಡು ಮನುಷ್ಯ ಸಿದ್ದರಾಮಯ್ಯ ಸರ್ಕಾರ ಇರೋದು ಇನ್ನು ಎರಡು ವರ್ಷ ಮಾತ್ರ ಎಂದು ಕಾಂಗ್ರೆಸ್‌ಗೆ ಟಕ್ಕರ್ ನೀಡಿದ್ದಾರೆ.
ಸ್ವಚ್ಛ ಭಾರತ್ ಕಾರ್ಯಕ್ರಮ ಯಾರು ತಂದಿದ್ದು? ಅದರ ಮೊದಲ ಹೆಸರು ಏನಿತ್ತು? ಸ್ಕೀಮ್ ಬದಲಾಯಿಸಬಹುದು, ಆದ್ರೆ ನಾವು ಸ್ಕ್ಯಾಮ್ ಮಾಡಲ್ಲ. ಆದ್ರೆ ಕಾಂಗ್ರೆಸ್‌ನವರು ಸ್ಕೀಮ್ ಬದಲು ಸ್ಕ್ಯಾಮ್‌ಗಳನ್ನು ಮಾಡ್ತಾರೆ. ಕಾಂಗ್ರೆಸ್ ಪಕ್ಷ ಅನ್ನುವುದೇ ಒಂದು ಫ್ರಾಡ್ ಕೇವಲ ಐದು ಗ್ಯಾರೆಂಟಿಗಳನ್ನು ಇಟ್ಟುಕೊಂಡು ಐದು ವರ್ಷ ತಳ್ಳುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ನಕಲಿ ಗಾಂಧಿಗಳ ಹೆಸರಿಟ್ಟಿರುವುದನ್ನು ಈಗಲೇ ತೆಗೆಯಲು ನಾನು ಪ್ರದಾನಮಂತ್ರಿಗಳಿಗೆ ಪತ್ರ ಬರೆಯುವೆ ಎಂದು ಹೇಳಿದ್ದಾರೆ.
ಸದನ ನಡೆಯುವಾಗ ರಾಹುಲ್ ಗಾಂಧಿ ಹೊರದೇಶಕ್ಕೆ ಹೋಗುತ್ತಾರೆ. ದೇಶದ್ರೋಹಿಗಳು , ಟೆರರಿಷ್ಟ್ ಗಳ ಬಳಿ ರಾಹುಲ್ ಗಾಂಧಿ ಸಂಪರ್ಕ ಇಟ್ಟುಕೊಳ್ಳುತ್ತಾರೆ.ಬಿಜೆಪಿ ಭಾರತ್ ಮಾತಾಕಿ ಜೈ ಎಂದರೆ ರಾಹುಲ್ ಗಾಂಧಿ ಯಾರದು ಅಂತಾರೆ. ಕಾಂಗ್ರೆಸ್ ಪಕ್ಷದವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಶುರು ಮಾಡಿದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಯಾವುದೇ ಸಂಬಂಧ ಇಲ್ಲ. ಆದ್ರೂ ಸಾವಿರಾರು ಕೋಟಿ ಬೆಳೆ ಬಾಳುವ ಪತ್ರಿಕೆಯಲ್ಲಿ ಅವ್ಯವಹಾರ ಮಾಡಿದ್ದಾರೆ. ಪತ್ರಿಕೆಯೇ ಬರದಿದ್ದರೂ ಕರ್ನಾಟದಿಂದ ಕೋಟಿ ಕೋಟಿ ಜಾಹೀರಾತು ನೀಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸಿಗರಿಗೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : ಕ್ರೀಡಾ ಸಂಕೀರ್ಣಕ್ಕೆ ನನ್ನ ಹೆಸರಿಟ್ಟರೆ ನಿಮಗೆ ಯಾಕೆ ಹೊಟ್ಟೆ ಉರಿ | ಜಿ.ಪರಮೇಶ್ವರ್



















