ಬೆಂಗಳೂರು: ಕಾಂಗ್ರೆಸ್ ಪಾಪದ ಕೊಡ ತುಂಬಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಹೊಸ ಬಾಂಬ್ ನ್ನು ಸಿಡಿಸಿದ್ದಾರೆ. ಜೆಡಿಎಸ್ (JDS) ಶಾಸಕರನ್ನು ಸೆಳೆಯಲು ಕಾಂಗ್ರೆಸ್ (Congress) ನಾಯಕರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರದಿಂದ ಆಪರೇಷನ್ ಹಸ್ತ ನಡೆಯುತ್ತಿದೆ. ಆದರೆ ಕಾಂಗ್ರೆಸ್ ನ ಆಪರೇಷನ್ ಹಸ್ತ ಯಾವುದೂ ವರ್ಕ್ ಆಗಲ್ಲ. ಆಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನವರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ನಮ್ಮ ಎಲ್ಲಾ ಶಾಸಕರು ಏನೇನು ನಡೆಯುತ್ತಿದೆ ಎಂದು ನನ್ನ ಬಳಿ ಹೇಳಿದ್ದಾರೆ. ಸಂಕ್ರಮಣ ಆದ ನಂತರ ಈ ಸರ್ಕಾರ ಮಾಡುತ್ತಿರುವ ಎಲ್ಲ ವಿಷಯಗಳನ್ನು ತೆರೆದಿಡುತ್ತೇನೆ. ದೇವರೇ ಕಾಂಗ್ರೆಸ್ ನವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಹೇಳಿದ್ದಾರೆ.