ಬೆಂಗಳೂರು: ಮನ್ ಕೀ ಬಾತ್ ಕಾರ್ಯಾಕ್ರಮದಲ್ಲಿ ಪ್ರಧಾನಿ ಮೋದಿಯವರು ಮಹತ್ವದ ವಿಚಾರವನ್ನು ಜನರ ಮುಂದೆ ಚರ್ಚೆಗೆ ಇಡುತ್ತಾರೆ. ಶ್ರಾವಣ ಮಾಸ ನಡುವೆಯು ಕೂಡ ಮಹಿಳಾ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಳೆದ ಭಾನುವಾರ ನಡೆದ ಮನ್ ಕೀ ಬಾತ್ ಕಾರ್ಯಕ್ರಮವನ್ನು ಶೇ. 50% ರಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಕರ್ನಾಟಕದಲ್ಲೂ ಸಹ ಹೆಚ್ಚು ಜನರು ಮನ್ ಕೀ ಬಾತ್ ಕಾರ್ಯಕ್ರಮವನ್ನು ಕೇಳಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಮೋದಿಯವರು ರಾಜಕೀಯ ಕುಟುಂಬ ಹಿನ್ನಲೆಯಲ್ಲಿ ಬಂದವರಲ್ಲ. ಭಾರತಕ್ಕೆ ಭವಿಷ್ಯವಿಲ್ಲ ಎಂದು ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಲು 2014ರಲ್ಲಿ ಮೋದಿಯವರು ಪ್ರಧಾನಿಯಾದರು. ಪ್ರಧಾನಿ ಎಂದು ಯಾವಾಗಲೂ ಮೋದಿ ಹೇಳಿಕೊಂಡಿಲ್ಲ. ನಾನು ಜನಸೇವಕ ಎಂದು ಮೋದಿ ಎಂದಿಗೂ ಹೇಳಿಕೊಳ್ಳುತ್ತಾರೆಂದು ಅವರು ಹೇಳಿದರು.
ಮೋದಿ ಮೂರನೇ ಭಾರಿಗೆ ಅಧಿಕಾರ ಹಿಡಿದಿದ್ದಾರೆ. ಅದು ನಮ್ಮ ಮೋದಿಯವರು ಪಾರದರ್ಶಕವಾಗಿ ನೀಡಿದ ಆಡಳಿತಕ್ಕೆ ಸಾಕ್ಷಿ. ಕಳೆದ ಕ್ಯಾಬಿನೆಟ್ ನಲ್ಲಿ 1 ಲಕ್ಷ ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಗೆ ಮೋದಿ ತೀರ್ಮಾನ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ರಕ್ಷಣಾ ವಲಯದಲ್ಲಿ ಏನೂ ಆಗಿರಲಿಲ್ಲ. ಈಗ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ವಲಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ ಎಂದಿದ್ದಾರೆ.
ಇನ್ನು, ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಬಿಹಾರದಲ್ಲಿ ಎನ್ ಡಿ ಎ ಒಕ್ಕೂಟವೇ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಕರ್ನಾಟಕದಲ್ಲಿ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಕರ್ನಾಟಕ ಎಂದರೆ ರಾಹುಲ್ ಗಾಂಧಿಗೆ ಎರಡು ರೀತಿಯಲ್ಲಿ ಪ್ರೀತಿ, ರಾಹುಲ್ ಗಾಂಧಿಗೆ ಕರ್ನಾಟಕ ಸರ್ಕಾರ ಎಟಿಎಂ ತರ ಆಗಿದೆ ಎಂದು ಟೀಕಿಸಿದ್ದಾರೆ.
ನಾಳೆ ಮತ್ತೆ ರಾಹುಲ್ ಗಾಂಧಿ ಚುನಾವಣೆ ಆಯೋಗದ ಮೇಲೆ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ನಾವು ಸಹ ಅದಕ್ಕೆ ಕೌಂಟರ್ ಕೊಡುತ್ತೇವೆ. ಕಾಂಗ್ರೆಸ್ ಒಂದು ದೇಶದ್ರೋಹಿ ಪಕ್ಷ ಕಿಡಿಕಾರಿದ್ದಾರೆ.
ಇನ್ನು, ರಾಜ್ಯ ಬಿಜೆಪಿ ಕಚೇರಿಯಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ವಿಜಯೇಂದ್ರ ಚಾಲನೆ ನೀಡಿದರು.