ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಮೀಸಲಾತಿಯನ್ನು ರಾಜ್ಯ ಸರ್ಕಾರ ನಿಗದಿಪಡಿಸಿ ಶುಕ್ರವಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಬೆನ್ನಲೇ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಸರ್ಕಾರ ಸಿದ್ಧಪಡಿಸಿದ ವಾರ್ಡ್ ವಾರು ಮೀಸಲಾತಿಯನ್ನು ತಿರಸ್ಕರಿಸಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನಲೆಯಲ್ಲಿ, ವಾರ್ಡ್ ವಾರು ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಈ ಬಗ್ಗೆ ಮಾತನಾಡಿದ ಎನ್.ಅರ್ ರಮೇಶ್, ಕಾಂಗ್ರೆಸ್ ಸರ್ಕಾರ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಮೀಸಲಾತಿ ಪಟ್ಟಿ ತಯಾರಿಸಲು ಸಮಿತಿ ರಚನೆ ಮಾಡಿ, ತಮ್ಮ ನಾಯಕರು, ಮುಖಂಡರು ಹೇಳಿದ ಹಾಗೆ ವಾರ್ಡ್ ಮೀಸಲಾತಿ ಮಾಡಿದ್ದಾರೆ. ಎಂದು ಸಮಿತಿಯ ವರದಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬಿಜೆಪಿ ವಾರ್ಡ ಮೀಸಲಾತಿ ಮಾಡಿದಾಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ, ಬಿಜೆಪಿ ಹಾಗೂ ಸಂಘ ಪರಿವಾರದ ಕಚೇರಿಯಲ್ಲಿ ಮೀಸಲಾತಿ ಮಾಡಿದ್ದಾರೆ ಎಂದು ಅರೋಪ ಮಾಡಿದ್ದರು. ಈಗ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮಗೆ ಇಷ್ಟ ಬಂದ ರೀತಿಯಲ್ಲಿ ಮೀಸಲಾತಿ ಪಟ್ಟಿ ಸಿದ್ಧತೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿ ಗೆಲುವು ಸಾಧಿಸುವ ವಾರ್ಡ್‌ಗಳ ಮೀಸಲಾತಿ ಬದಲಾವಣೆ ಮಾಡಿದರೆ. ಇದಕ್ಕೆ ನಾವು ಹೆದರುವುದಿಲ್ಲ. ಪ್ರತಿ ವಾರ್ಡ್‌ನಲ್ಲು ನಮ್ಮ ಕಾರ್ಯಕರ್ತರು ಇದ್ದಾರೆ. ಶತಯಾಗತಯಾ 5 ನಗರಪಾಲಿಕೆ ಮೇಯರ್ ಗದ್ದುಗೆ ಬಿಜೆಪಿ ಹಿಡಿಯುತ್ತದೆ. ಇನ್ನೂ ಮೀಸಲಾತಿ ಸಂಬಂಧಿಸಿದಂತೆ ಕೋರ್ಟ ಮೆಟ್ಟಿಲು ಹತ್ತುವುದಾಗಿ ಬಿಜೆಪಿ ಮುಖಂಡ ಎನ್ ಅರ್ ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ರಾಜ್ಯದಲ್ಲಿ ಸಿಎಂಗೆ ಒಂದು ಕಾನೂನು ಶಾಸಕಿಗೆ ಒಂದು ಕಾನೂನಾ?’ | ನಳಿನ್ ಕುಮಾರ್ ಆಕ್ರೋಶ



















