ನವದೆಹಲಿ: ಹರಿಯಾಣದ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.
ಹರಿಯಾಣದಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಎಂಬಂತೆ ಅಧಿಕಾರದ ಗದ್ದುಗೆಗೆ ಏರಿದೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಇಂದು ಮಧ್ಯಾಹ್ನ ನಾನು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೆ. ದೂರಿಗೆ ಚುನಾವಣಾ ಆಯೋಗವು ಉತ್ತರಿಸಿದೆ. ನಾನು ಆ ಉತ್ತರಕ್ಕೆ ಉತ್ತರಿಸಿದ್ದೇನೆ. ಎಣಿಕೆಯ ಪ್ರಕ್ರಿಯೆ, ಕನಿಷ್ಠ 3 ಜಿಲ್ಲೆಗಳಲ್ಲಿ ಇವಿಎಂಗಳ ಕಾರ್ಯನಿರ್ವಹಣೆಯ ಕುರಿತು ಗಂಭೀರವಾದ ದೂರುಗಳನ್ನು ಸ್ವೀಕರಿಸಿದ್ದೇವೆ ಎಂದಿದ್ದಾರೆ.
ಹರಿಯಾಣದಲ್ಲಿ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಆಶ್ಚರ್ಯಕರ ಮತ್ತು ಅರ್ಥಗರ್ಭಿತವಾಗಿವೆ. ಅವು ಸ್ವೀಕಾರ್ಹವಲ್ಲ. ಹಿಸಾರ್, ಮಹೇಂದ್ರಗಢ ಮತ್ತು ಪಾಣಿಪತ್ ನಿಂದ ಇವಿಎಂಗಳಲ್ಲಿನ ವ್ಯತ್ಯಾಸದ ಕುರಿತು ದೂರುಗಳು ಕೇಳಿ ಬಂದಿವೆ ಎಂದು ಕೂಡ ಆರೋಪಿಸಿದ್ದಾರೆ.