ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government)ದ ವಿರುದ್ಧ ಜೆಡಿಎಸ್ ಯವ ನಾಯಕ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಕೊಟ್ಟ ಮಾತು ತಪ್ಪುತ್ತಿದೆ. ಯಾವಾಗ ಬೇಕಾದಾಗ ಗ್ಯಾರಂಟಿಗೆ ಹಣ ಬರುತ್ತಿದೆ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೊಟ್ಟ ಮಾತಿನಂತೆ ಕೃಷಿ ಸಮ್ಮಾನ್ ಯೋಜನೆ ಹಣವನ್ನ ರೈತರ ಖಾತೆಗೆ ಪ್ರತಿ ತಿಂಗಳು ಹಾಕ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮಾತ್ರ ಪ್ರತಿ ತಿಂಗಳು ದುಡ್ಡು ಹಾಕುತ್ತಿಲ್ಲ. ನಿಮ್ಮ ಬಳಿ ದುಡ್ಡು ಇದೆಯೋ ಇಲ್ಲವೋ ಹೇಳಿ ಬಿಡಿ ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರು ಚುನಾವಣೆ ಸಮಯದಲ್ಲಿ ಕಟಾ ಕಟ್ ಹಣ ಹಾಕಿಸ್ತೀವಿ ಎಂದಿದ್ದರು. ಆದರೆ, ಈಗ ಹಣ ಕಟಾ ಕಟ್ ಅಂತ ಬರುತ್ತಿಲ್ಲ. ಕಟ್ ಕಟ್ ಆಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.