ಮಂಡ್ಯ : KR ಪೇಟೆ ನೀರಾವರಿ ಇಲಾಖೆಯೂ ರೈತರಿಗೆ ಪರಿಹಾರ ಕೊಡದ ಕಾರಣ ಪೀಠೋಪಕರಣ ಜಪ್ತಿಗೆ ಪಟ್ಟಣದ ಸೀವಿಲ್ ಕೊರ್ಟ್ ಆದೇಶ ಹೊಡಿಸಿದೆ.
ಪಟ್ಟಣದ ಹೇಮಾವತಿ ಜಲಾಶಯ ಯೋಜನೆ ನ-03 ವಿಭಾಗ ಕಚೇರಿಯ AE ಕಚೇರಿ ಜಪ್ತಿಯಾಗಿದ್ದು, ಆದೇಶದೊಂದಿಗೆ ಕಳ್ಳನಕೆರೆ ಹಾಗು ಗಂಗನಹಳ್ಳಿ ಗ್ರಾಮದ ರೈತರು ಸ್ಥಳಕ್ಕೆ ಬಂದಿದ್ದು, ಆದೇಶ ಪ್ರತಿ ತೋರಿಸಿ ಕಚೇರಿಯಲ್ಲಿದ್ದ ಪೀಠೋಪಕರಣವನ್ನು ವಾಹನದಲ್ಲಿ ಹೊತ್ತೋಯ್ದಿದ್ದಾರೆ.
ಶೀಥ ಪೀಡಿತ ಗ್ರಾಮಗಳ ಪುನರ್ವಸತಿಗೆ ಹಣ ಬಿಡುಗಡೆ ಮಾಡದೆ ಅಧಿಕಾರಿಗಳಿಂದ ನಿರ್ಲಕ್ಷ್ಯದಿಂದಾಗಿ ಹಲವು ಬಾರಿ ಹಣ ಬಿಡುಗಡೆಗೆ ಕೋರ್ಟ್‌ನಿಂದ ನೋಟೀಸ್ ನೀಡಿ ಸೂಚನೆ ನೀಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಗೆ ಬೇಸತ್ತು ಇದೀಗ ನ್ಯಾಯಾಲಯದಿಂದ ಕಚೇರಿ ಜಪ್ತಿ ಆದೇಶ ಹೊರಡಿಸಿದೆ. ವಕೀಲ ಪುಟ್ಟೇಗೌಡರಿಂದ ರೈತರು ಹಾಗು ಗ್ರಾಮಸ್ಥರ ವಾದ ಮಂಡನೆ ಮಾಡಿದ್ದರು.
ಇದನ್ನೂ ಓದಿ : ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು


















