ಬೆಂಗಳೂರು: ಈಜೀಪುರ ಫ್ಲೈ ಓವರ್ ಕಾಂಕ್ರೀಟ್ ಬಿದ್ದ ಪರಿಣಾಮ ಆಟೋ ಜಖಂ ಆಗಿರುವ ಘಟನೆ ನಡೆದಿದೆ.
ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಆಟೋ ಮೇಲೆ ಕಾಂಕ್ರೀಟ್ ಬಿದ್ದಿದೆ. ಕಳೆದ 10 ವರ್ಷಗಳಿಂದಲೂ ಈಜೀಪುರ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಜನ ಬಳಕೆಗೂ ಮೊದಲೇ ಅದು ಉರುಳಿ ಬಿದ್ದಿದೆ. ಮೇಲ್ಮೈ ಕಾಮಗಾರಿ ಉರುಳಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಜನರ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಂಕ್ರೀಟ್ ಬೀಳುತ್ತಿದ್ದರಿಂದಾಗಿ ರಾತ್ರೋ ರಾತ್ರಿ ನೆಟ್ ಕಟ್ಟಿ ಮರೆ ಮಾಚಲು ಗುತ್ತಿಗೆದಾರ ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಗಮನಿಸಿದರೆ ಕಳಪೆ ಕಾಮಗಾರಿ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಈಜೀಪುರ ಫ್ಲೈ ಓವರ್ 2026ರ ಜೂನ್ ನಲ್ಲಿ ಸಾರ್ವಜನಿಕ ಬಳಕೆಗೆ ಸಿಗಲಿದೆ ಎಂದು ಈಗಾಗಲೇ ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ. ಆದರೆ, ಉದ್ಘಾಟನೆಗೂ ಮುನ್ನವೇ ಕಾಂಕ್ರೀಟ್ ಉರುಳಿ ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಅಲ್ಲದೇ, ಹಲವಾರು ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ.



















