ಮಂಡ್ಯ : ಕಡತಕ್ಕೆ ಸೇರಿದ್ದ ದೂರು ಅರ್ಜಿಗೆ ಪೂಜೆ ಮಾಡಿ ಎಂದು ಲೋಕಾಯುಕ್ತ ಪೊಲೀಸರಗೆ ಗಂಧದ ಕಡ್ಡಿ ರವಾನೆ ಮಾಡಿ ದೂರುದಾರ ವ್ಯಕ್ತಿಯೊಬ್ಬ ವಿನೂತನವಾಗಿ ಆಕ್ರೋಶ ಹೊರಹಾಕಿರುವ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.
ಸಮಾಜ ಸೇವಕ ಮಂಜುನಾಥ್‌ನಿಂದ ಆಕ್ರೋಶ ವ್ಯಕ್ತವಾಗಿದೆ. ಕಟ್ಟಡ ಕಾಮಗಾರಿಯೊಂದರ ತನಿಖೆಗೆ ಆಗ್ರಹಿಸಿ ಮಂಜುನಾಥ್ ದೂರು ನೀಡಿದ್ದರು. ಮಂಜುನಾಥ್ ಅವರ ದೂರನ್ನು ಆಧರಿಸಿ ಇಲಾಖೆ ಇಂಜಿನಿಯರ್ ತನಿಖೆ ಕೈಗೊಂಡಿದ್ದರು. ಆದರೆ ತನಿಖೆ ವರದಿ ಸರಿ ಇಲ್ಲಾ ಎಂದು ಮಂಜುನಾಥ್ ನ.11,2024ರಲ್ಲಿ ಮತ್ತೊಂದು ದೂರು ನೀಡಿದ್ದರು. ಈ ದೂರಿಗೆ ಇದುವರೆಗೂ ಅಧಿಕಾರಿಗಳು ತನಿಖೆ ಕೈಗೊಳ್ಳದ ಕಾರಣ RTI ಮೂಲಕ ದೂರು ಅರ್ಜಿ ಬಗ್ಗೆ ಮಾಹಿತಿ ಕೇಳಿದ್ದಾರೆ.
ಆಗ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು. ಅರ್ಜಿ ಕಡತದಲ್ಲಿದೆ ಎಂದು ಹಿಂಬರಹ ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಂಜುನಾಥ್ ಬೇಸರಗೊಂಡ ಮಂಜುನಾಥ್, ದೂರು ಅರ್ಜಿಯನ್ನು ಕಡತದಲ್ಲೆ ಇರಿಸಿ ಪೂಜೆ ಮಾಡಿ ಎಂದು ಗಂಧದ ಕಡ್ಡಿ ರವಾನೆ ಮಾಡಿದ್ದಾರೆ.
ಇದನ್ನೂ ಓದಿ : ಹಳ್ಳಿಯಿಂದ ಲಂಡನ್‌ವರೆಗೂ ಹಿಂದೂ ಹಬ್ಬ ಟಾರ್ಗೆಟ್!? ಸೆಕ್ಯುಲರ್ ಪ್ರಗತಿಪರರು ಇದಕ್ಕೆ ಉತ್ತರಿಸ್ತಾರಾ?



















