ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ತಂಡದ ವಿರುದ್ಧ ದೂರು ದಾಖಲಾಗಿದೆ.
ನಟ ರಿಷಬ್ ಶೆಟ್ಟಿ ಈಗ ಪ್ರಶಾಂತ್ ವರ್ಮಾ ನಿರ್ದೇಶನದ ತೆಲುಗು ಸಿನಿಮಾ ‘ಜೈ ಹನುಮಾನ್’ ನಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಆದರೆ, ಹನುಮನ ಅವತಾರವನ್ನು ಬೇರೆ ರೀತಿಯಲ್ಲಿ ತೋರಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ರಿಷಬ್ ಹಾಗೂ ಚಿತ್ರ ತಂಡದ ವಿರುದ್ಧ ದೂರು ದಾಖಲಾಗಿದೆ.
ಪೌರಾಣಿಕ ಸಿನಿಮಾಗಿಂತಲೂ ಭಿನ್ನವಾಗಿ ತೋರಿಸಲಾಗುತ್ತಿದೆಯೇ ಹನುಮಾನ ಪಾತ್ರ?
ಈ ಚಿತ್ರದ ಪೋಸ್ಟರ್ ನಲ್ಲಿ ರಿಷಬ್ ಶೆಟ್ಟಿ ಉದ್ದ ಗಡ್ಡ ಬಿಟ್ಟು ಶ್ರೀರಾಮನ ಮೂರ್ತಿ ಅಪ್ಪಿಕೊಂಡಿದ್ದಾರೆ. ಟೀಸರ್ ನಲ್ಲೂ ಇದೇ ರೀತಿಯ ಚಿತ್ರ ಕಂಡಿವೆ. ಆದರೆ, ಭಾರತೀಯ ಪೌರಾಣಿಕ ಸಿನಿಮಾಗಳಲ್ಲಿ ಹನುಮಂತನ ಪಾತ್ರವನ್ನು ಬೇರೆ ರೀತಿಯಾಗಿ ತೋರಿಸಲಾಗಿತ್ತು. ಹನುಮನ ಮುಖ, ವಾನರ ರೀತಿಯ ಹೋಲಿಕೆಯಲ್ಲಿರುವುದನ್ನು ಇಲ್ಲಿಯವರೆಗೆ ತೋರಿಸಲಾಗಿತ್ತು. ಆದರೆ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ಮುಖವನ್ನು ಸಾಮಾನ್ಯ ಮನುಷ್ಯನ ಮುಖದಂತೆ ತೋರಿಸಲಾಗಿದೆ. ಹೀಗಾಗಿ ನ್ಯಾಯವಾದಿ ತಿರುಮಲ ರಾವ್ ಎಂಬುವವರು ನಾಂಪಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಯಾರ ವಿರುದ್ಧ ದೂರು ದಾಖಲು?
ನಿರ್ದೇಶಕ ಪ್ರಶಾಂತ್ ವರ್ಮಾ, ರಿಷಬ್ ಶೆಟ್ಟಿ, ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ಈಗ ದೂರು ದಾಖಲಿಸಲಾಗಿದೆ.