ಕೋಲಾರ: ಬಾಲ್ಯ ವಿವಾಹ ಕಾಯ್ದೆ ವಿರುದ್ಧವಾಗಿ ಶಾಸಕ ನಂಜೇಗೌಡ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ದ ದೂರು ದಾಖಲಾಗಿದೆ.
ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಪ್ರಾಪ್ತರ ಮದುವೆ ತಡೆಯುವಲ್ಲಿ, ಲೋಪಗಳಾಗಿವೆ. ಎರಡ್ಮೂರು ತಿಂಗಳ ಅಂತರ ಇದ್ದರೆ ಕ್ಷಮೆ ನೀಡುವಂತೆ ಹೇಳಿದ್ದರು ಎನ್ನಲಾಗಿದೆ.
ಈ ವಿಷಯವಾಗಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವಂತೆ ಹೇಳಿಕೆ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೋಲಾರದ ಗಲ್ ಪೇಟ್ ಪೋಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಆಮ್ ಆದ್ಮಿ ಪಕ್ಷದ ಕೋಲಾರ ಜಿಲ್ಲಾದ್ಯಕ್ಷ ವೆಂಕಟಾಚಲಪತಿ ನೇತೃತ್ವದಲ್ಲಿ ದೂರು ದಾಖಲಾಗಿದೆ.