ನವದೆಹಲಿ: ಮೈಕ್ರೋಸಾಫ್ಟ್, ಟಿಸಿಎಸ್, ಕ್ಯಾನ್ವಾ, ಟಿಕ್ ಟಾಕ್, ಎಚ್ ಪಿ ಸೇರಿ ಹಲವು ಪ್ರಮುಖ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ ಅಲಾಧಿಬೆಟ್ ಅಂಗಸಂಸ್ಥೆಯಾಗಿರುವ ಗೂಗಲ್ ಕೂಡ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿದುಬಂದಿದೆ. ಗೂಗಲ್ ಕಂಪನಿಯ ಆ್ಯಂಡ್ರಾಯ್ಡ್ ಸಾಫ್ಟ್ ವೇರ್, ಕ್ರೋಮ್ ಬ್ರೌಸರ್, ಪಿಕ್ಸೆಲ್ ಸ್ಮಾರ್ಟ್ ಫೋನ್ ವಿಭಾಗದಲ್ಲಿರುವ ನೂರಾರು ನೌಕರರನ್ನು ಗೂಗಲ್ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಫೆಬ್ರವರಿಯಲ್ಲಷ್ಟೇ ಗೂಗಲ್ ಕ್ಲೌಡ್ ವಿಭಾಗದಲ್ಲಿಕೆಲಸ ಮಾಡುತ್ತಿದ್ದ ಕೆಲ ನೌಕರರನ್ನು ಗೂಗಲ್ ವಜಾಗೊಳಿಸಿತ್ತು. ಇದರೊಂದಿಗೆ ಜಾಗತಿಕವಾಗಿ ಪ್ರಸಕ್ತ ವರ್ಷದಲ್ಲಿಯೇ 1 ಲಕ್ಷಕ್ಕೂ ಅಧಿಕ ನೌಕರರನ್ನು ಕೆಲಸದಿಂದ ವಜಾಗೊಳಿಸಿದಂತಾಗಿದೆ. ಜಾಗತಿಕ ಸಂಘರ್ಷ, ಆರ್ಥಿಕ ಹಿಂಜರಿತದ ಭೀತಿಯ ಮಧ್ಯೆಯೇ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿರುವುದು ಆತಂಕದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಗೂಗಲ್ ಸಂಸ್ಥೆಯು 2023ರ ಜನವರಿಯಲ್ಲಿಕೂಡ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಜಗತ್ತಿನಾದ್ಯಂತ ಇರುವ ಒಟ್ಟು ಸಿಬ್ಬಂದಿಯಲ್ಲಿಶೇ.6ರಷ್ಟು ಉದ್ಯೋಗಿಗಳನ್ನು ಗೂಗಲ್ ವಜಾಗೊಳಿಸಿತ್ತು. ಮೈಕ್ರೋಸಾಫ್ಟ್ ಕಂಪನಿಯು ಮೇ ತಿಂಗಳಲ್ಲಿನೌಕರರನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಿದೆ ಎಂದು ವರದಿಗಳು ತಿಳಿಸಿವೆ. ಇದರ ಮಧ್ಯೆಯೇ ಗೂಗಲ್ ಕೂಡ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ.
ಜಾಗತಿಕ ರಾಜಕೀಯ ಸಂಘರ್ಷ, ಆರ್ಥಿಕ ಹಿಂಜರಿತ, ವ್ಯಾಪಾರ ಕುಂಠಿತ ಸೇರಿ ಜಗತ್ತಿನ ಹಲವು ದೈತ್ಯ ಕಂಪನಿಗಳು 2024ರಲ್ಲಿ1.5 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ನೌಕರರನ್ನು ಮನೆಗೆ ಕಳುಹಿಸಿವೆ. ಭಾರತದಲ್ಲೂಟಿಸಿಎಸ್, ಇನೊಧೀಸಿಸ್ ಸೇರಿ ವಿವಿಧ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ.