ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದ್ದು, ವಾಣಿಜ್ಯ ಬಳಕೆಯ (Commercial Use) 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆ 41 ರೂ. ಇಳಿಕೆ ಕಂಡಿದೆ.
ಹೊಸ ಹಣಕಾಸು ವರ್ಷ ಆರಂಭವಾಗುತ್ತಿದ್ದು, ಹಣಕಾಸು ನಿಯಮಗಳು, ದರ ಏರಿಕೆ, ಬ್ಯಾಂಕಿಂಗ್ ವಲಯಗಳಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತಿದೆ. ತೈಲ ಕಂಪನಿಗಳು 19 ಕೆ.ಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ನ ಬೆಲೆ 41 ರೂ. ಇಳಿಕೆಯಾಗಿದೆ. ಹೊಸ ಬೆಲೆ ಏ.2 ಅಂದರೆ ನಾಳೆಯಿಂದ ಜಾರಿಯಾಗಲಿದೆ.
ಫೆ.1ರಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 7 ರೂ. ಇಳಿಕೆ ಮಾಡಲಾಗಿತ್ತು. ಡಿಸೆಂಬರ್ ನಲ್ಲಿ ಸಿಲಿಂಡರ್ ಗಳ ಬೆಲೆಯನ್ನು 62 ರೂ.ಗೆ ಏರಿಕೆ ಮಾಡಲಾಗಿತ್ತು. ಮತ್ತೆ 41 ರೂ. ಇಳಿಕೆ ಮಾಡಲಾಗಿದೆ. ಹೊಸ ಬೆಲೆಯಿಂದಾಗಿ ರೆಸ್ಟೋರೆಂಟ್, ಹೋಟೆಲ್ ಮತ್ತು ವಾಣಿಜ್ಯ ಘಟಕಗಳಿಗೆ ಪ್ರಯೋಜನವಾಗಲಿದ್ದು, ಆದರೆ ದಿನಬಳಕೆಯ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿದೆ.
ದೆಹಲಿಯಲ್ಲಿ 1,803 ರೂ. ಇದ್ದ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನ ಬೆಲೆಯು 1,762 ರೂ.ಗೆ ಇಳಿದಿದೆ. ಬೆಂಗಳೂರಿನಲ್ಲಿ 1,836 ರೂ. ಇದೆ.