ಬೀದರ್ : ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಹಾಸ್ಯ ನಟ ವೈಜನಾಥ ಬಿರಾದಾರ ಸಂತಾಪ ಸೂಚಿಸಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈಜನಾಥ ಬಿರಾದಾರ ಶಾಮನೂರು ಶಿವಶಂಕರಪ್ಪರನ್ನ ಕಳೆದುಕೊಂಡು ಬಹಳ ದುಃಖ ಆಗಿದೆ. ಸಮಾಜಕ್ಕೆ ಶಾಮನೂರುರವರ ಕೊಡುಗೆ ಬಹಳಷ್ಟಿದೆ. ಶಾಮನೂರುರವರು ಸಮಾಜಪರ ಸೇವೆಯಿಂದ ರಾಜ್ಯಕ್ಕೆ ಚಿರಪರಿಚಿತರಾಗಿದ್ದರು ಎಂದಿದ್ದಾರೆ
ನಾನೂ ಕೂಡ ದಾವಣಗೆರೆಗೆ ಹೋದಾಗ ಅವರನ್ನ ಭೇಟಿ ಮಾಡಿದ್ದೆ ಕಲಾವಿದರ ಬಗ್ಗೆ ಅವರಿಗೆ ಅಪಾರ ಗೌರವ ಇತ್ತು. ಶಾಮನೂರುರವರು ಕಷ್ಟ, ಪರಿಶ್ರಮದಿಂದ ಮೇಲೆ ಬಂದವರು. ಅವರ ಕುಟುಂಬಕ್ಕೆ ಅಗಲಿಕೆ ನೋವನ್ನು ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ ಬಂಪರ್ ; ಒನ್ ಟೈಮ್ ಸೆಟಲ್ ಮೆಂಟ್ ಗೆ ಚಾನ್ಸ್



















