ಬೆಂಗಳೂರು: ಮಂಪರು ಪರೀಕ್ಷೆ ಮಾಡಿಸಿಕೊಳ್ಳುವುದಕ್ಕಿಂತ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಆಹ್ವಾನ ನೀಡಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನಾನು ರಾಜಣ್ಣರಿಗೆ ಮಂಪರು ಪರೀಕ್ಷೆ ಮಾಡಿಸಿ ಎಂದಿದ್ದು ನಿಜ. ಅವರು ನನಗೂ ಮಂಪರು ಪರೀಕ್ಷೆ ಮಾಡಿಸಬೇಕು ಎಂದಿದ್ದಾರೆ. ನಾನು ಅವರು ಮಂಪರು ಪರೀಕ್ಷೆ ಮಾಡಿಸಿ ಅದರ ಫಲಿತಾಂಶ ಬರುವುದು ವಿಳಂಬವಾಗುತ್ತದೆ. ಅದರ ಬದಲಿಗೆ ನಾನು ಅವರು ಇಬ್ಬರು ಕೂಡ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಿದ್ರೆ ಒಳ್ಳೆಯದು. ಚರ್ಚೆಗೆ ಅವರು ಬರಲಿ ಎಂದು ಆಹ್ವಾನ ಕೊಟ್ಟಿದ್ದಾರೆ.