ಬೆಂಗಳೂರು : ಇತ್ತೀಚೆಗೆ ಜನರು ಸೋಶಿಯಲ್ ಮೀಡಿಯಾವನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಯಾವುದೇ ಅಪ್ಡೇಟ್ಗಳನ್ನೂ ಫೇಸ್ಬುಕ್, ಇನ್‌ಸ್ಟಾಗ್ರಾಂ ಮೂಲಕವೇ ತಿಳಿದುಕೊಳ್ಳುತ್ತಿದ್ದಾರೆ. ಹಾಗೆಯೇ ಮನರಂಜನಾ ವಾಹಿನಿಗಳು ಕೂಡ ತಮ್ಮ ವೀಕ್ಷಕರಿಗೆ ತಾವು ಪ್ರಸಾರ ಮಾಡುತ್ತಿರುವ ರಿಯಾಲಿಟಿ ಶೋ, ಸೀರಿಯಲ್ ಸೇರಿದಂತೆ ಯಾವುದೇ ಅಪ್ಡೇಟ್ಗಳನ್ನು ಫೇಸ್ಬುಕ್, ಇನ್‌ಸ್ಟಾಗ್ರಾಂ ಮುಖೇನವೇ ಪ್ರೇಕ್ಷಕರಿಗೆ ನೀಡುತ್ತಿದೆ. ಆದರೆ, ಕೆಲವೇ ಕ್ಷಣಗಳ ಹಿಂದಷ್ಟೇ ಕನ್ನಡದ ಖ್ಯಾತ ಮನರಂಜನಾ ವಾಹಿನಿ ಕಲರ್ಸ್ ಕನ್ನಡದ ಅಧಿಕೃತ ಫೇಸಬುಕ್ ಮತ್ತು ಇನ್‌ಸ್ಟಾಗ್ರಾಂ ಪೇಜ್ಗಳು ದಿಢೀರ್ ಕಣ್ಮರೆಯಾಗಿವೆ.

ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಂ, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಒಂದೆರಡು ಗಂಟೆಗಳಿಂದ ಮಾಯವಾಗಿದ್ದು, ಸರ್ಚ್ ಮಾಡಿದರೂ ಇವು ಸಿಗುತ್ತಿಲ್ಲ. ಹಲವು ಸೀರಿಯಲ್ಗಳು ಮತ್ತು ಬಿಗ್ ಬಾಸ್ನಂಥ ರಿಯಾಲಿಟಿ ಶೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡುವ ದೊಡ್ಡ ವರ್ಗವೇ ಇದೆ. ಇದೀಗ ಇಂತಹ ಕಾರ್ಯಕ್ರಮಗಳ ಅಪ್ಡೇಟ್ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಭಾರೀ ಆಘಾತವಾಗಿದೆ.

ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾ ಮಾಯ ಆಗಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತಾಂತ್ರಿಕ ಸಮಸ್ಯೆ ಆಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಅಕೌಂಟ್ಗಳು ಡಿ-ಆಕ್ಟಿವೇಟ್ ಆಗಿದೆ ಎಂಬ ಮಾಹಿತಿಯಿದೆ. ಆದ್ರೆ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ. ಯಾವಾಗ ಇದು ಸರಿಯಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಕಲರ್ಸ್ ಕನ್ನಡದ ವಾಟ್ಸಾಪ್ ಚಾನೆಲ್ನಲ್ಲಿ ಪ್ರೋಮೊಗಳನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಬಿಗ್ ಬಾಸ್ ಕನ್ನಡದ ಪ್ರೇಮಿಗಳು ಅಲ್ಲಿ ಅಪ್‌ಡೇಟ್ ಪಡೆದುಕೊಳ್ಳುವ ಜೊತೆಗೆ ಪ್ರೋಮೊ ವೀಕ್ಷಣೆ ಮಾಡಬಹುದು.
ಇದನ್ನೂ ಓದಿ : ಲೈಟ್ ಆಫ್ ವಿಚಾರಕ್ಕೆ ಗಲಾಟೆ |ಸಹೋದ್ಯೋಗಿಯನ್ನೇ ಹ*ತ್ಯೆಗೈದು ಪೊಲೀಸರಿಗೆ ಶರಣಾದ ಆರೋಪಿ!



















