ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆ ಬಿಸಿಎ ವಿಭಾಗದ ಮುಖ್ಯಸ್ಥನನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.
ಸಂಜೀವ್ ಕುಮಾರ್ ಮಂಡಲ್ ಬಂಧಿತ ಆರೋಪಿ.
ಪೋಲಿಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಅಡಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿಮಾಡಿದ್ದಾರೆ. ವಿಚಾರಣೆಗೆ ಬಂದಾಗ ಆರೋಪಿಯನ್ನು ಬಂಧಿಸಿದ್ದಾರೆ.
೧೯ ವರ್ಷ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಅವಳು ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಸಂಜೀವ್ ಕುಮಾರ್ ಬಿಸಿಎ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅ.2 ರಂದು ಊಟಕ್ಕೆಂದು ಮನೆಗೆ ಕರೆಸಿ, ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ಪೂರ್ಣ ಅಂಕಗಳನ್ನು ಕೊಡಿಸಲು ಸಹಾಯ ಮಾಡುತ್ತೇನೆ ಎಂದು ಆಮೇಶ ಒಡ್ಡಿದ್ದಾರೆ. ಅಷ್ಟರಲ್ಲಿ ಸ್ನೇಹಿತೆಯಿಂದ ಫೋನ್ ಕರೆ ಬಂದಿದ್ದು, ತುರ್ತಾಗಿ ಹೋಗಬೇಕಿದೆ ಎಂದು ಎಚ್ಒಡಿ ಮನೆಯಿಂದ ಹೇಗೋ ತಪ್ಪಿಸಿಕೊಂಡು ಬಂದೆ ನಂತರ ಪೋಷಕರಿಗೆ ವಿಚಾರ ತಿಳಿಸಿದೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾರೆ.