ಈಶ್ವರ್ ಖಂಡ್ರೆ & ರಾಜಶೇಖರ್ ಪಾಟೀಲ್ ಇಬ್ಬರು ಬೀದರ್‌ನ ಎರಡು ಕಣ್ಣುಗಳು. ರಾಜಶೇಖರ್ ಪಾಟೀಲ್‌ರವರು ತಾಯಿ ಮನಸ್ಸಿನವರಾದ್ರೆ, ಈಶ್ವರ್ ಅಣ್ಣನವರು ತಂದೆ ಮನಸ್ಸಿನವರು. ನಮ್ಮನ್ನೆಲ್ಲಾ ರಾಜಶೇಖರ್ ಪಾಟೀಲ್‌ರವರು ಮಡಿಲಿನಲ್ಲಿ ಮಲಗಿಸಿಕೊಳ್ತಾರೆ. ಆದರೆ, ಈಶ್ವರ್ ಖಂಡ್ರೆಯವರು ಹೆಗಲ ಮೇಲೆ ಹೊತ್ತುಕೊಳ್ತಾರೆ. ನಿಮ್ಮಿಬ್ಬರ ಮಧ್ಯೆ ಕೂಸು ಬಡವಾಗುತ್ತಿದೆ.
ನಮ್ಮನ್ನ ದಯವಿಟ್ಟು ಬಡವರನ್ನಾಗಿ ಮಾಡಬೇಡಿ ಎಂದು ಮಾಜಿ ಸಚಿವ ರಾಜಶೇಖರ್ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮಾರ್ಮಿಕವಾಗಿ ಹೇಳಿದ್ದಾರೆ. ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ್ ತಾಳಂಪಳ್ಳಿಯವರ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡುತ್ತಿದ್ದ ವೇಳೆ, ಜಿಲ್ಲೆಯಲ್ಲಿ ಭಿನ್ನಮತ ಬಿಗಡಾಯಿಸುತ್ತಿರುವ ಬೆನ್ನಲ್ಲೇ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜಶೇಖರ್ ಪಾಟೀಲ್‌ರವರು ಬೇಕಾದಷ್ಟು ಅಧಿಕಾರ ನೋಡಿದ್ದಾರೆ. ರಾಜಶೇಖರ್ ಪಾಟೀಲ್ ಸೋತಿದ್ದೂ ನಮಗೆ ನಷ್ಟವೇ ಹೊರತು ಅವರಿಗಲ್ಲ. ನೀವೆಲ್ಲರೂ ಅವರನ್ನ ಗೆಲ್ಲಿಸಿದ್ರೆ ಹುಮನಾಬಾದ್ ಕ್ಷೇತ್ರದಲ್ಲಿ ಬಂಪರ್ ಆಗಿ ಮೆರೆಯಬಹುದಿತ್ತು. ನಾವು ಇವತ್ತು ತುಂಬಾ ಬೇಸರದಲ್ಲಿದ್ದೇವೆ, ಕಷ್ಟದಲ್ಲಿದ್ದೇವೆ ಎಂದು ಅವರು ಭಾವುಕವಾಗಿ ನುಡಿದಿದ್ದಾರೆ.