ಈಗಂತೂ ಎಲ್ಲ ಕಡೆ ಚಹಾ ಪ್ರಿಯರು ಇದ್ದಾರೆ. ತಲೆ ನೋವಿಂದ ಹಿಡಿದು ಏನೇ ಒತ್ತಡ ಇದ್ರೂ ಹೇ ಮೊದಲು ಚಹಾ ಕುಡಿಯೋಣ ಬಾರಪ್ಪ ಅಂತಾರೆ. ಇತ್ತೀಚಿನ ದಿನಗಳಲ್ಲಿ ವೆರೈಟಿ ವೆರೈಟಿ ಅಡುಗೆ ಮಾಡುವವರನ್ನು ನೋಡಿರುತ್ತೇವೆ. ಇಷ್ಟು ದಿನ ತೆಂಗಿನ ಚಿಪ್ಪಲಿ ಚಹಾ ಮಾಡುವ ಟ್ರೆಂಡಿಂಗ್ ಇತ್ತು. ಇದೀಗ ತೆಂಗಿನಕಾಯಿ ಬಳಸಿ ಎಳನೀರಿಂದ ಚಹಾ ಮಾಡಿದ್ದಾರೆ.
ಸದ್ಯ ಈ ವೀಡಿಯೋ ಎಲ್ಲೆಡೆ ವೈರಲಾಗುತ್ತಿದ್ದು, ನಾವು ತಿನ್ನುವ ಊಟಕ್ಕೆ ಅದರದ್ದೇ ಆದ ಮಹತ್ವ ಇದೆ. ಈ ರೀತಿ ಏನೇನೋ ಮಾಡಬೇಡಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ವೈರಲ್ ಆಗಿರುವ ವಿಡಿಯೋ ಸ್ಟವ್ ಮೇಲೆ ಎಳನೀರು ಇಟ್ಟು ಅದಕ್ಕೆ ಹಾಲು, ಸಕ್ಕರೆ, ಚಹಾ ಪುಡಿ ಹಾಕಿ ಬಿಸಿ ಬಿಸಿ ಚಹಾ ತಯಾರಿಸಿ ಬಿಸ್ಕೇಟ್ ಮಧ್ಯೆ ಇಡುವುದನ್ನು ಕಾಣಬಹುದು.