ಚಿಕ್ಕಮಗಳೂರು: ಹೃದಯಾಘಾತದಿಂದಾಗಿ ತೆಂಗಿನಕಾಯಿ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
29 ವರ್ಷದ ಹರೀಶ್ ಸಾವನ್ನಪ್ಪಿರುವ ಯುವಕ ಎನ್ನಲಾಗಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದವರು ಎನ್ನಲಾಗಿದೆ. ಹರೀಶ್ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದರು.
ಬುಧವಾರ ಬೆಳಗಿನ ಜಾವ 2.30ಕ್ಕೆ ಹರೀಶ್ ವಾಂತಿ ಮಾಡಿಕೊಂಡಿದ್ದರು. ಹೀಗಾಗಿ ಕುಟುಂಬಸ್ಥರು ಗ್ಯಾಸ್ಟ್ರಿಕ್ ಎಂದು ಮಾತ್ರೆ ನುಂಗಿಸಿ ಮಲಗಿಸಿದ್ದರು. 3.30ಕ್ಕೆ ಮತ್ತೆ ವಾಂತಿಯಾಗಿ ಯುವಕ ಕುಸಿದು ಬಿದ್ದಿದ್ದಾರೆ. ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಹರೀಶ್ ತೆಂಗಿನಕಾಯಿ ವ್ಯಾಪಾರದ ಜೊತೆ ತೋಟ ನೋಡಿಕೊಂಡಿದ್ದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



















