ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ಕಾರಿನ ಮೇಲೆ ಬರೋಬ್ಬರಿ 7 ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ಇರುವುದು ಈಗ ಬೆಳಕಿಗೆ ಬಂದಿದೆ.
ಹೌದು, ಈ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಸಮೇತ ಹರಿದಾಡುತ್ತಿದೆ. 20000 ರೂ. ದಂಡ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ಕಾರಿನ ಫೋಟೋ ಪೋಸ್ಟ್ ಮಾಡಿ ದಂಡ ಪಾವತಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ಕಾರು KA 05 GA 2023 ಕಾರಿನ ಮೇಲೆ ಬರೋಬ್ಬರಿ 7 ಪ್ರಕರಣಗಳಿವೆ. ಸದ್ಯ ಸಂಚಾರಿ ದಂಡ ಶೇ. 50ರಷ್ಟು ರಿಯಾಯಿತಿ ಇದೆ. ದಂಡ ಪಾವತಿಸಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಗಹಿಸಿದ್ದಾರೆ.
ಸೀಟ್ ಬೆಲ್ಟ್ ಹಾಕದೇ ಇರುವುದು ಹಾಗೂ ಓವರ್ ಸ್ಪೀಡ್(ಅತಿ ವೇಗ)ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿವೆ.