ಬೆಂಗಳೂರು | ಕನ್ನಡ ಚಿತ್ರರಂಗದ ಲೆಜೆಂಡರಿ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಇಂದು ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ.
ರಿಲೀಸ್ ಹಾಗೂ ಪ್ರಮೋಶನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಟೀಮ್, ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿದೆ. ಪೋಸ್ಟರ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ ತಾವು ಸಿನಿಮಾ ನೋಡೋದಾಗಿ ಆಶ್ವಾಸನೆ ನೀಡಿದ್ದಾರೆ.
ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೋಡಾರ್ ನಿರ್ಮಾಣ ತೆರೆಯ ಮೇಲೆ ಅಚ್ಚುಕಟ್ಟಾಗಿ ಕಾಣುತ್ತೆ. ಆದಿತ್ಯ, ರಾಧಿಕಾ ನಾರಾಯಣ್, ರವಿಶಂಕರ್, ಪ್ರಕಾಶ್ ರೈ, ದಿವ್ಯಾ ವಿಸ್ಮಿತಾ ತಮಗೆ ಕೊಟ್ಟ ಪಾತ್ರಗಳನ್ನ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಮರ್ಶಿಯಲ್ ಮನರಂಜನೆಯ ಜೊತೆಗೆ ನಮ್ಮ ಮಣ್ಣಿನ ಸಂಸ್ಕೃತಿಯ ಅನಾವರಣವನ್ನ ‘ವೀರಕಂಬಳ’ ತೆರೆಯ ಮೇಲೆ ಸಾಧ್ಯವಾಗಿಸಿದೆ.
ಇದನ್ನೂ ಓದಿ : ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅರವಿಂದ್ ಕೇಜ್ರಿವಾಲ್.. ಸಿಸೋಡಿಯಾ ಸಾಂತ್ವನ



















