ಮಂಡ್ಯ: ಡಿನ್ನರ್ ಪಾರ್ಟಿ ಮಾಡುವುದು ತಪ್ಪಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಯಾರು ಬೇಕಾದರೂ ಡಿನ್ನರ್ ಪಾರ್ಟಿ ಮಾಡಬಹುದು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಬೇರೆಯವರಿಗೆ ಊಟ ಕೊಡುತ್ತಿದ್ದೇವಾ?
ನಮ್ಮ ಮಂತ್ರಿಗಳಿಗೆ ನಾವು ಊಟ ಮಾಡಿಸುತ್ತಿದ್ದೇವೆ. ಅದೊಂದು ಅತಿಥಿ ಸತ್ಕಾರವಷ್ಟೇ. ಡಿನ್ನರ್ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಮಾಡಲು ಆಗಲ್ಲ. ಸಿಎಂ ಬದಲಾಗಬೇಕೆಂದರೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.
60 ಪರ್ಸೆಂಟ್ ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡುತ್ತಿವೆ. ಪೆನ್ ಡ್ರೈವ್ ಇದೆ ಅಂತಾ ಹೇಳಿದ್ದಾರೆ. ಆದರೆ, ಅದನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಹಿಂದೆ ಕೂಡ ನಾವು ಅವರ ಮೇಲೆ 40 ಪರ್ಸೆಂಟ್ ಆರೋಪ ಮಾಡಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪವನ್ನು ನಾವು ತನಿಖೆಗೆ ವಹಿಸಿದ್ದೇವು ಅಷ್ಟೇ ಎಂದು ಹೇಳಿದ್ದಾರೆ