ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು(ಗುರುವಾರ) ಸಚಿವ ಸಂಪುಟ ಸಭೆ ಬಳಿಕ ದೆಹಲಿಗೆ ಪ್ರಯಾಣ ಬೆಳಸಲಿದ್ದು, ರಾಹುಲ್ ಗಾಂಧಿ ಜೊತೆ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.
ಇಂಡಿಯಾ ಮೈತ್ರಿಕೂಟದ ಆಂತರಿಕ ಸಭೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಬುಲಾವ್ ನೀಡಿರುವ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯ ಬಳಿಕ ಮಧ್ಯಾಹ್ನ 3.30ರ ಸುಮಾರಿಗೆ ದೆಹಲಿಗೆ ತೆರಳಲಿದ್ದಾರೆ. 15 ದಿನಗಳ ಅಂತರದಲ್ಲಿ ಇದು 3 ಮೂರನೇ ಬಾರಿಗೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ.
ಈ ಬಾರಿಯಾದರೂ ನಿಗಮ ಮಂಡಳಿ ಮತ್ತು ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆಯೇ ಎಂಬ ಪ್ರಶ್ನೆ ಸಿಎಂ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು, ಸಹಜವೆಂಬಂತೆ ʼಸಿಎಂ ಬದಲಾವಣೆʼ ವಿಚಾರವೂ ಸಿಎಂ ಸಿದ್ದರಾಮಯ್ಯರ ಈ ದೆಹಲಿ ಪಯಣದ ಹಿಂದೆ ಮತ್ತೆ ಚರ್ಚೆಗೆ ಬಂದಿದೆ.



















