ನಾವು ಯುದ್ಧದ ಪರವಾಗಿಲ್ಲ ಎಂದಿರುವ ಸಿಎಂ ಸಿದ್ಧರಾಮಯ್ಯರ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ 26 ಪ್ರವಾಸಿಗರ ಹತ್ಯೆಯನ್ನು ಮೊದಲು ಅವರು ಖಂಡಿಸಬೇಕು. ಬಳಿಕ ಅವರು ಪ್ರತಿಕ್ರಿಯೆ ನೀಡಬೇಕು. ಯುದ್ಧದ ಅವಶ್ಯಕತೆ ಬಿದ್ದರೇ, ನಮ್ಮ ದೇಶದ ನಾಗರಿಕರ ರಕ್ಷಣೆಯನ್ನು ನಾವು ಮಾಡಲೇಬೇಕು. ನಾವು ಯುದ್ಧದ ಪರವಾಗಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹೇಳಿರುವುದು ಸರಿಯಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.


















