ಬೆಂಗಳೂರು : ಜಾತಿ ಗಣತಿ ಬಗ್ಗೆ ಅಂತಿಮವಾಗಿ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, 22 ರಿಂದ ಜಾತಿಗಣತಿ ನಡೆಯುತ್ತದೆ ಅಂದುಕೊಂಡಿದ್ದೇನೆ. ನಿನ್ನೆ ರಾತ್ರಿ ಕೂಡ ಸಿಎಂ ಸಭೆ ಮಾಡಿದ್ದಾರೆ.
ಅಧಿಕಾರಿಗಳಿಂದ ವರದಿ ಮತ್ತು ಮಾಹಿತಿ ಪಡೆದಿದ್ದಾರೆ. ಅಂತಿಮವಾಗಿ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಸುರ್ಜೇವಾಲಾ ಡಿಸಿಎಂ ಹಾಗೂ ಸಿಎಂ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾತಿ ಗಣತಿ ಬಗ್ಗೆ ಸುರ್ಜೀವಲ್ ಅವರೊಂದಿಗೆ ಯಾವ ಚರ್ಚೆಯು ಆಗಿಲ್ಲ.
ಬೆಂಗಳೂರು ಮಹಾನಗರ ಪಾಲಿಕೆಯ ಬಗ್ಗೆ ಮತ್ತು ಚುನಾವಣೆ ಬಗ್ಗೆ ಮಾತ್ರ ಮಾತುಕತೆ ಮಾಡಿರೋದು ಎಂದು ಹೇಳಿದರು.