ಮೈಸೂರು: ಸಿಎಂ ಸಿದ್ದರಾಮಯ್ಯ ಅವರೆ ನಿಮಗೆ ಹೆಣ್ಣು ಮಕ್ಕಳು ಇಲ್ಲ, ಆದರೆ ರಾಜ್ಯದ ಬೇರೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇಲ್ಲಾವಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರನಲ್ಲಿ ದಸರಾ ಸಂದರ್ಭದಲ್ಲಿ ಬಾಲಕಿಯ ಆತ್ಯಾಚಾರ ಪ್ರಕರಣದ ಕುರಿತು ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಇಂಥ ಅಮಾನುಷ ಕೃತ್ಯ ಆಗಿದ್ದರೂ, ಸಿಎಂ ಸ್ಥಾನದಲ್ಲಿರುವ ವ್ಯಕ್ತಿ ಕನಿಷ್ಠ ಒಂದು ಪ್ರತಿಕ್ರಿಯೆ ನೀಡಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನೆ ಮಾಡಿದ್ದಾರೆ.
ಪೊಲೀಸರಿಗೆ ಜನ ಬೈದರು ಇದರಲ್ಲಿ ಪೊಲೀಸರ ತಪ್ಪಿಲ್ಲ. ಪಾಸ್ ಹೆಚ್ಚಿಗೆ ಪ್ರಿಂಟ್ ಮಾಡಿದ್ದು ಯಾರು? ಈ ಸರ್ಕಾರದಲ್ಲಿ ಪೊಲೀಸ್ ಇಲಾಖೆಯು ಹೀನಾಯ ಸ್ಥಿತಿಗೆ ತಲುಪಿದೆ. ಮೈಸೂರಿನಲ್ಲಿ ಎಲ್ಲೆಡೆ ಇಸ್ಪೀಟ್ ದಂಧೆ ನಡೆಯುತ್ತಿದೆ. ಅದನ್ನು ಹಿಡಿಯಲು ಹೋದರೆ ರಾಜಕಾರಣಿಗಳು ಬ್ರೇಕ್ ಹಾಕುತ್ತಾರೆ. ಡ್ರಗ್ಸ್ ಮಾಫಿಯಾ ನಡೀತಿದೆ. ಪೊಲೀಸರು ಏನೂ ಮಾಡಬಾರದು ಎಂದು ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಸಕರು, ಮಂತ್ರಿಗಳ ಮನೆ ಮುಂದೆ ಪೊಲೀಸರು ನಿಂತುಕೊಳ್ಳುವ ಸ್ಥಿತಿ ಬಂದಿದೆ. ಗೃಹ ಸಚಿವರಂತೂ ಏನೂ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಖುರ್ಚಿ ಖಾಲಿ ಮಾಡಿದರೆ ನಾನು ಕೂರಬೇಕು ಎಂದು ಕಾಯುತ್ತಿದ್ದಾರೆ. ನಾಗಮಂಗಲ ಘಟನೆ ಆಯಿತು ಸಣ್ಣಪುಟ್ಟ ಘಟನೆ ಎಂದು ಹೇಳಿದರು. ಇಂತಹ ಗೃಹ ಮಂತ್ರಿಯಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.