ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) ಪಂದ್ಯ ವೀಕ್ಷಿಸಿದ್ದಾರೆ.
ರಾಜಕೀಯ ಜಂಜಾಟದ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಅವರು ಪಂದ್ಯ ವೀಕ್ಷಿಸಿದ್ದಕ್ಕೆ ಆರ್ ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಿಎಂಗೆ ಸಚಿವರಾದ ಕೆ.ಎನ್. ರಾಜಣ್ಣ ಹಾಗೂ ಭೈರತಿ ಸುರೇಶ್ ಸಾಥ್ ನೀಡಿದ್ದಾರೆ. ಐಪಿಎಲ್ (IPL 2025) ಪಂದ್ಯವನ್ನು ಸಿಎಂ ವೀಕ್ಷಸಿ ಎಂಜಾಯ್ ಮಾಡಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಆರ್ ಸಿಬಿ 20 ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿದೆ.



















