ಮುಂಬೈ ಬಾಂದ್ರದಲ್ಲಿ ನಡೆದ ಬಾಬಾ ಸಿದ್ಧಿಕಿ ಹತ್ಯೆ ಘೋರ ಕೃತ್ಯವಾಗಿದ್ದು, ಹಂತಕರನ್ನು ಗಲ್ಲಿಗೇರಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ ಹೇಳಿಕೆ ನೀಡಿದ್ದಾರೆ.
ಮುಂಬೈನಲ್ಲು ಸುದ್ದಿಗಾರರೊಂದಿಗೆ ಮಾತನಾಡಿದ ಶಿಂದೆ, “ಈ ಪ್ರಕರಣದಲ್ಲಿ ಆರು ಮಂದಿ ಸೇರಿ ಕೊಲೆಗೈದಿರುವ ಮಾಹಿತಿ ಇದ್ದು, ಈಗಾಗಲೇ ಮೂವರ ಬಂಧನವಾಗಿದೆ. ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪಂಜಾಬ್ ಮೂಲದ ಕಿಲ್ಲರ್ ಮೊಹಮ್ಮದ್ ಜಿಶನ್ ಅಕ್ತರ್ ಪತ್ತೆ ಕಾರ್ಯ ನಡೆಯುತ್ತಿದೆ. ಪಂಜಾಬ್, ಹರಿಯಾಣಗಳಲ್ಲಿ ಅಕ್ತರ್ ವಿರುದ್ಧ ಇದೇ ರೀತಿಯ ಒಂಬತ್ತು ಪ್ರಕರಣಗಳಿವೆ. ಬಾಬಾ ಸಿದ್ಧಿಕಿ ಹತ್ಯೆ ಮಾಡಿರುವ ಎಲ್ಲರನ್ನೂ ಹುಡುಕಿ ತಂದು ಗಲ್ಲಿಗೇರಿಸುವಂತೆ ಮಾಡುತ್ತೇವೆ.” ಎಂದರು