ಕಲಾ ಸರಸ್ವತಿ ಹಿರಿಯ ನಟಿ ಬಿ. ಸರೋಜಾ ದೇವಿ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರೋಜಾ ದೇವಿ ಅವರ ಅಗಲಿಕೆ ಇಡೀ ಚಿತ್ರರಂಗದಲ್ಲಿ ಆಘಾತ ಆಗಿದೆ. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿ, ಸುಮಾರು 70 ವರ್ಷ ಸೇವೆ ಸಲ್ಲಿಸಿದ್ದಾರೆ. ಅವ್ರಿಗೆ ಅಭಿನಯ ಸರಸ್ವತಿ ಎಂದು ಕರೆಯುತ್ತಾರೆ.
ಬರೀ ಕನ್ನಡದಲ್ಲಿ ಮಾತ್ರ ನಟನೆ ಮಾಡಿಲ್ಲ. ತಮಿಳು, ಹಿಂದಿ ಭಾಷೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು. ರಾಜಕುಮಾರ್, ದಿಲೀಪ ಕುಮಾರ್, ಸೇರಿ ಹಲವರ ಜೊತೆ ನಟನೆ ಮಾಡಿದ್ದಾರೆ. ಅವರು ಖಾಸಗಿ ಜೀವನದಲ್ಲಿ ಶಿಸ್ತು ಬದ್ಧ ಜೀವನ ನಡೆಸಿದ್ದಾರೆ.
ಈ ಹಿಂದೆ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೆ, ಅವರ ಹಲವು ಸಿನಿಮಾ ನೋಡಿದ್ದೇನೆ . ಕಿತ್ತೂರು ಚೆನ್ನಮ, ಭಾಗ್ಯವಂತರು ಹಲವು ಸಿನಿಮಾ ನೋಡಿದ್ದೇನೆ. ಅವರ ಸಾವಿನದಿಂದ ಅಪಾರವಾದ ನಷ್ಟ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಪ್ರಾರ್ಥನೆ ಮಾಡುತ್ತೇನೆ. ಸರ್ಕಾರದ ಆವತಿಯಿಂದ ಸ್ಟೇಟ್ ಹಾನರ್ ಕೊಡುತ್ತೇವೆ. ಸರ್ಕಾರಿ ಗೌರವ ಸಮರ್ಪಣೆ ಆಗುತ್ತೆ. ಅವರ ಹುಟ್ಟೂರಲ್ಲಿ ಅಂತಿಮ ವಿಧಿ ವಿಧಾನವನ್ನು ನಡೆಸಲಾಗುತ್ತದೆ ಎಂದು ಹೇಳಿದರು.



















