ಬೆಂಗಳೂರು: ಇಂದಿನ ದಿನವನ್ನು ಭಾರತ ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದೆ. 6 ವರ್ಷಗಳ ಹಿಂದೆ ಭಾರತೀಯ ಸೇನೆ (Indian Army) ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ಹುತಾತ್ಮರಾಗಿದ್ದರು. ಇಡೀ ಭಾರತವೇ ಶೋಕಾಚರಣೆ ಆಚರಿಸಿ, ಮರುಕ ವ್ಯಕ್ತಪಡಿಸಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಹುತಾತ್ಮ ಯೋಧರನ್ನು ಸ್ಮರಿಸಿ ನಮನ ಸಲ್ಲಿಸಿದ್ದಾರೆ.
ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡರು. ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ಭೀಕರವಾಗಿ ದಾಳಿ ನಡೆಸಲಾಗಿತ್ತು. ಈ ಘಟನೆಯನ್ನು ಇಡೀ ಜಗತ್ತು ಖಂಡಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ಭಾರತೀಯರು #BlackDay ಹೆಸರಿನಲ್ಲಿ ಪೋಸ್ಟ್ ಮಾಡಿ ವೀರ ಯೋಧರ ಬಲಿದಾನ ಸ್ಮರಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಬಲಿದಾನ ದಿನವನ್ನು ನೆನೆದಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಅವರು, ಪುಲ್ವಾಮ ದಾಳಿ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ರಾಷ್ಟ್ರ ರಕ್ಷಣೆಯ ಮಹತ್ ಕಾರ್ಯದಲ್ಲಿ ಹುತಾತ್ಮರಾದ ಎಲ್ಲಾ ವೀರಯೋಧರ ತ್ಯಾಗ – ಬಲಿದಾನವನ್ನು ಸ್ಮರಿಸುತ್ತಾ, ನನ್ನ ಗೌರವ ನಮನ ಅರ್ಪಿಸುತ್ತೇನೆ ಎಂದಿದ್ದಾರೆ.